5 ಸಾವಿರ ಅಲ್ಲ JUST 100 ಮಾತ್ರ : ರಾಜ್ಯ ಸರಕಾರದ ವೆಂಟಿಲೇಟರ್ ಖರೀದಿ ಹುಸಿ ಭರವಸೆ.

kannada t-shirts

 

ಮೈಸೂರು, ಮಾ.27, 2020 : (www.justkannada.in news) : ಒಂದು‌ ಸಾವಿರ ಹೊಸ ವೆಂಟಿಲೇಟರ್ ಖರೀದಿಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸಚಿವ‌ ಶ್ರೀರಾಮುಲು ನೀಡಿದ್ದ ಭರವಸೆ ಹುಸಿಯಾಗಿದೆ.

ಕೆಲ ದಿನಗಳ ಹಿಂದೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಕೋವಿಡ್ -19 ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ಆಸ್ಪತ್ರೆಯನ್ನು ಇದಕ್ಕಾಗಿ ಮೀಸಲಿಡಲು ನಿರ್ಧರಿಸಲಾಗುತ್ತದೆ. ವೆಂಟಿಲೇಟರ್ ತಯಾರಿಸುವ ಕಂಪನಿ ಮೈಸೂರಿನ ಸ್ಕಾನರೇ ಸಂಸ್ಥೆಗೆ ವೆಂಟಿಲೇಟರ್ ಪೂರೈಸಲು ಸೂಚಿಸಲಾಗಿದೆ. 1000 ವೆಂಟಿಲೇಟರ್ ಖರೀದಿಸಲಾಗುತ್ತಿದೆ ಎಂದಿದ್ದರು.

one-thousand-new-ventilator-in-state-false-only-100-mysore-ventilator-manufacturing-for-coronavirus-patients-says-skanray-technologies

ಆದರೆ ಸ್ಕ್ಯಾನರೇ ಟೆಕ್ನಾಲಜೀಸ್ ನ ಮುಖ್ಯಸ್ಥರ ಹೇಳಿಕೆ ಪ್ರಕಾರ, ವೆಂಟಿಲೇಟರ್ ಪೂರೈಕೆ ಸಂಬಂಧ ಕರ್ನಾಟಕ ಸರಕಾರ ಈ ತನಕ ಯಾವುದೇ ಆದೇಶ ನೀಡಿಲ್ಲ. ಜತೆಗೆ ಮೌಖಿಕವಾಗಿ 100 ವೆಂಟಿಲೇಟರ್ ಒದಗಿಸುವಂತೆ ಮಾತ್ರ ಕೇಳಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜತೆಗೆ ನೆರೆ ರಾಜ್ಯಗಳಾದ ಕೇರಳ, ಆಂಧ್ರ ಹಾಗೂ ತೆಲಂಗಾಣದ ಸರಕಾರ ತಲಾ 5000 ವೆಂಟಿಲೇಟರ್ ಪೂರೈಕೆಗೆ ಬೇಡಿಕೆ ಸಲ್ಲಿಸಿವೆ. ನಮ್ಮ ಸಂಸ್ಥೆ ದಿನದ 24 ಗಂಟೆಯೂ ಕೆಲಸ ಮಾಡಿದರೂ ತಿಂಗಳಿಗೆ ಕೇವಲ 5000 ವೆಂಟಿಲೇಟರ್ ಮಾತ್ರ ತಯಾರಿಸಲು ಸಾಧ್ಯ ಎಂದು ವಾಸ್ತವ ಅಂಶ ಬಹಿರಂಗಪಡಿಸಿದ್ದಾರೆ.

one-thousand-new-ventilator-in-state-false-only-100-mysore-ventilator-manufacturing-for-coronavirus-patients-says-skanray-technologies

ಸ್ಕ್ಯಾನರೇ ಸಂಸ್ಥೆಯ ಮುಖ್ಯಸ್ಥರ ಈ ಹೇಳಿಕೆ ರಾಜ್ಯ ಸರಕಾರದ ಬೇಜವಾಬ್ದಾರಿಗೆ ಕನ್ನಡಿ ಹಿಡಿಯುವಂತಿದೆ. ಕೇವಲ ಪ್ರಚಾರಕ್ಕಾಗಿ ಸಚಿವರು ಹೇಳಿಕೆ ನೀಡುತ್ತಿದ್ದಾರೆ ಹೊರತು, ವಾಸ್ತವವಾಗಿ ಯಾವುದೇ ಕಾರ್ಯ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ.

key words : one-thousand-new-ventilator-in-state-false-only-100-mysore-ventilator-manufacturing-for-coronavirus-patients-says-skanray-technologies

website developers in mysore