ಕೇರಳದಲ್ಲಿ ಓಣಂ ಆಚರಣೆ ವೇಳೆ ಸಾಕಷ್ಟು ಸಮಸ್ಯೆ : ಅದೇ ಪರಿಸ್ಥಿತಿ ಮೈಸೂರು ದಸರಾಕ್ಕೆ ಬೇಡ- ಸಚಿವ ಡಾ.ಕೆ ಸುಧಾಕರ್…

ಮೈಸೂರು,ಅಕ್ಟೋಬರ್,5,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ವಿಚಾರದಲ್ಲಿ ಇನ್ನು ಹಲವು ಮಾರ್ಪಾಡುಗಳನ್ನು ಮಾಡಲು ಚರ್ಚೆ ನಡೆದಿದೆ.  ಕೇರಳದಲ್ಲಿ ಓಣಂ ಆಚರಣೆ ವೇಳೆ ಸಾಕಷ್ಟು ಸಮಸ್ಯೆ ಆಯ್ತು. ಅದೇ ರೀತಿ ಪರಿಸ್ಥಿತಿ  ಮೈಸೂರು ದಸರಾ ಆಚರಣೆ ವೇಳೆ ನಿರ್ಮಾಣವಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್,  ದಸರಾವನ್ನು ತೀರ ಸರಳವಾಗಿ ಮಾಡುವ ಅವಶ್ಯಕತೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ದಸರಾದಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಷ್ಟ ಇಲ್ಲ‌ ಎಂದರು.

ಕೇರಳದಲ್ಲಿ ಓಣಂನ್ನು ವಿಜೃಂಭಣೆಯಿಂದ ಆಚರಣೆ ಮಾಡಿ ಸಾಕಷ್ಟು ಸಮಸ್ಯೆ ಆಯ್ತು. ಮೈಸೂರಿನಲ್ಲಿ ಅದೇ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ನಮ್ಮ ಉದ್ದೇಶ. ಈಗಾಗಿ ಹಲವು ಮಾರ್ಪಾಡು ಮಾಡಲು ಶೀಘ್ರದಲ್ಲಿ ಸಭೆ ನಡೆಸಲಾಗುವುದು ಎಂದು ಡಾ.ಕೆ ಸುಧಾಕರ್ ತಿಳಿಸಿದರು.

ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಬೆಡ್ ಲಭ್ಯ….

ಕೋವಿಡ್ ನಿರ್ವಹಣೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ರಾಜ್ಯಾದ್ಯಂತ 33ಸಾವಿರ ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ  ಮಾಡಲಾಗುತ್ತದೆ. ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಬೆಡ್ ಲಭ್ಯವಿರಲಿದೆ. ವೆಂಟಿಲೇಟರ್ ಇಲ್ಲದ ಕಾರಣ ಸಾವಿನ ಪ್ರಮಾಣ ಹೆಚ್ಚಳವಾಗಿಲ್ಲ. ಆಕ್ಸಿಜನ್ ಬೆಡ್ ಗಳ ಕೊರತೆಯಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈಗ ಆಕ್ಸಿಜನ್ ಬೆಡ್ ಗಳ ಕೊರತೆ ನೀಗಿಸಲಾಗುತ್ತಿದೆ ಎಂದು ತಿಳಿಸಿದರು.

65ವರ್ಷ ಮೇಲ್ಪಟ್ಟವರು ಸ್ವಯಂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿದೆ. ದಿನೇ ದಿನೇ ಕೊರೋನಾ ಸಂಖ್ಯೆ ಹೆಚ್ಚಾಗಿ ದೇಶದಲ್ಲೇ ಕೊರೋನಾ ಹೆಚ್ಚಳದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಇದನ್ನು ನಿಯಂತ್ರಿಸಲು ಕೊರೋನಾ ಕಾರ್ಯಪಡೆ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಶ್ರಮವಹಿಸುತ್ತೇವೆ ಎಂದರು.

ಮಾಸ್ಕ್ ಧರಿಸದಿದ್ದರೇ ಸಾವಿರ ರೂ. ದಂಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಹಣ ವಸೂಲಿ ಮಾಡುವ ಉದ್ದೇಶದಿಂದ ದಂಡ ಹಾಕುತ್ತಿಲ್ಲ. ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಒಂದೇ ಮದ್ದು. ಹಾಗಾಗಿ ದಂಡದ ಮೂಲಕ ಜನರನ್ನು ಜಾಗೃತಿಗೊಳಿಸಬೇಕಿದೆ ಎಂದರು.

key words: Onam celebration – Kerala – quite – problem-same situation- cannot – Mysore – Minister -Dr K Sudhakar.