ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಜೂನ್ 21 ರಂದು ‘ಆನ್‌ ಲೈನ್‌ ಯೋಗಸೆಷನ್‌’

ಮೈಸೂರು, 17 ಜೂನ್ 2021(www.justkannada.in):  ಯೋಗದ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ವತಿಯಿಂದ ಜೂನ್ 21ರಂದು ಬೆಳಿಗ್ಗೆ 7.00 ರಿಂದ 8.00ರವರೆಗೆ ವರ್ಚುವಲ್ ಯೋಗ ಸೆಷನ್‌ ಆಯೋಜಿಸಲಾಗಿದೆ.jk

ಖ್ಯಾತ ಕ್ಷೇಮ ಸಲಹಾತಜ್ಞ ಮತ್ತು ಲೈಫ್‌ ಕೋಚ್‌ ಸುಪ್ರಿಯಾ ದತ್ತಾ ಅವರು ವಿವಿಧ ರೀತಿಯ ಯೋಗಾಸನಗಳು ಮತ್ತು ಅದನ್ನು ಸೂಕ್ತವಾಗಿ ಮಾಡುವ ನಿಟ್ಟಿನಲ್ಲಿ ಜನರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಈ ವಿಶ್ವ ಯೋಗ ದಿನದಂದು, ಆರೋಗ್ಯಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗದ ಪ್ರಯೋಜನಗಳನ್ನು ತಿಳಿಸುವ ಉದ್ದೇಶದಿಂದ ಪ್ರತಿಯೊಬ್ಬರನ್ನೂ ತಲುಪಲು ಆಸ್ಪತ್ರೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಆನ್‌ಲೈನ್ ಸೆಷನ್‌ ನಲ್ಲಿ ಭಾಗವಹಿಸಲು ಆಸಕ್ತರು 9480363494 | 7829128776 ಗೆ ಕರೆಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಸೀಮಿತ ಸ್ಲಾಟ್‌ಗಳಿವೆ ಮತ್ತು ಯಾವುದೇ ನೋಂದಣಿ ಶುಲ್ಕವಿಲ್ಲ.

ಸಾರ್ವಜನಿಕರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ಸೆಷನ್‌ ಆಯೋಜಿಸಲು ನಾವು ನಿರ್ಧರಿಸಿದ್ದೇವೆ. ಯೋಗದ ಸಂಪೂರ್ಣ ಅಡಿಪಾಯ ಸಮಾಧಾನಚಿತ್ತದ ಮೇಲೆ ನಿರ್ಮಿತವಾಗಿದೆ. ಮತ್ತು ಈ ಕೋವಿಡ್ ಕಾಲದಲ್ಲಿ ಇದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ನಾವು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ. ಹಾಗಾಗಿ ಈ ಆನ್‌ಲೈನ್ ಸೆಷನ್‌ ನಲ್ಲಿ ಜನರು ಭಾಗವಹಿಸಲು ಮತ್ತು ತಜ್ಞರಿಂದ ಗರಿಷ್ಠ ಲಾಭ ಪಡೆಯಲು ನಾವು ಒತ್ತಾಯಿಸುತ್ತೇವೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ, ಮೈಸೂರು (ಮಣಿಪಾಲ್ ಆಸ್ಪತ್ರೆಗಳ ಒಂದು ಘಟಕ) ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ ತಿಳಿಸಿದ್ದಾರೆ.

ವರ್ಚುವಲ್‌ ಸೆಷನ್‌ನಲ್ಲಿ ಭಾಗವಹಿಸಲು ಬಳಸಬಹುದಾದ ಲಿಂಕ್‌- https://meet.google.com/hux-afhc-tbp

Key words: On-line -YogaSession – June 21st –mysore- Columbia Asia Hospital