ದೇಶದಲ್ಲಿ ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆ: ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಪತ್ರ.

ನವದೆಹಲಿ,ಜನವರಿ,1,2021(www.justkannada.in): ದೇಶದಲ್ಲಿ ಒಮಿಕ್ರಾನ್ ಹರಡುವಿಕೆ ಹೆಚ್ಚಿದೆ. ಹೀಗಾಗಿ ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸಿ ಎಂದು ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಸಂಬಂಧ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸಬೇಖು.  ಸೋಂಕಿನ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನಿಗಾವಹಿಸಬೇಕು. ಮೇಕ್ ಶೀಫ್ಟ್  ಆಸ್ಪತ್ರೆಗಳನ್ನ ಹೆಚ್ಚಿಸಿ ವಿಶೇಷ ತಂಡ ರಚಿಸಿ ಎಂದು ತಿಳಿಸಿದ್ದಾರೆ.

ಸೋಂಕು ತೀವ್ರಗೊಂಡರೇ ಹೋಂ ಐಸೋಲೇಷನ್ ಹೆಚ್ಚಳ ಮಾಡಿ. ಮನೆಯಲ್ಲಿ ಐಸೋಲೇಷನ್ ಗೆ ತಂಡ ರಚಿಸಿ. ಟೆಸ್ಟಿಂಗ್ ಬೆಡ್ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ. ಸೋಂಕಿತರ ಸಂಪರ್ಕ ಪತ್ತೆ, ಕ್ವಾರಂಟೈನ್ ನಿಯಮ ಪಾಲನೆಗೆ ಸೂಚನೆ ನೀಡಿದ್ದಾರೆ.

Key words: Omicron – country-Letter -Central Health Department – all -State Governments.