ಖಾಸಗಿ ಶಾಲೆಗಳ ಶೇ.30 ರಷ್ಟು ಶುಲ್ಕ ಕಡಿತದ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ…

ಬೆಂಗಳೂರು,ಜನವರಿ,30,2021(www.justkannada.in):  ಖಾಸಗಿ ಶಾಲೆಗಳು ಶೇ.30ರಷ್ಟು ಶುಲ್ಕ ಕಡಿತಗೊಳಿಸಬೇಕು. ಜತೆಗೆ ಯಾವುದೇ ಅಭಿವೃದ್ಧಿ ಶುಲ್ಕವನ್ನ ಪಡೆಯುವಂತಿಲ್ಲ ಎಂದು ನಿನ್ನೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದರು.jk

ಶುಲ್ಕ ಕಡಿತದ ಬಗ್ಗೆ ಇಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ  ಅಧೀನ ಕಾರ್ಯದರ್ಶಿ ಹೆಚ್.ಎಸ್.ಶಿವಕುಮಾರ್ ಈ ಅಧಿಕೃತ  ಆದೇಶ ಹೊರಡಿಸಿದ್ದು, ಬೋಧನಾ ಶುಲ್ಕದ ಶೇ.70ರಷ್ಟು ಮಾತ್ರ ಪಡೆಯಲು ಅನುಮತಿ ನೀಡಲಾಗಿದೆ. ಶಾಲಾ ಅಭಿವೃದ್ಧಿ ಶುಲ್ಕ, ಐಚ್ಚಿಕ ಶುಲ್ಕ, ಟ್ರಸ್ಟ್, ಸೊಸೈಟಿ ಸೇರಿದಂತೆ ಉಳಿದಂತೆ ಯಾವುದೇ ಶುಲ್ಕ ಪಡೆಯದಂತೆ ಆದೇಶದಲ್ಲಿ ತಿಳಿಸಲಾಗಿದೆ. official order- state government - 30 percent -reduction -private schools.

ಈಗಾಗಲೇ ಪೂರ್ಣ ಶುಲ್ಕ ಪಾವತಿಸಿದಲ್ಲಿ ಹೆಚ್ಚುವರಿ ಶುಲ್ಕವನ್ನು ಮುಂದಿನ ವರ್ಷಕ್ಕೆ ಕಾಯ್ದುಕೊಳ್ಳುವಂತೆಯೂ ಸೂಚಿಸಲಾಗಿದೆ.  ಖಾಸಗಿ ಶಾಲೆಗಳ ಶುಲ್ಕ ಕಡಿತಕ್ಕೆ ಪೋಷಕ ಸಂಘಟನೆ ಆಗ್ರಹಿಸಿತ್ತು. ಹಾಗೆಯೇ ನಾಳೆ(ಜ.31) ಪ್ರತಿಬಟನೆ ನಡೆಸಲು ಕರೆ ನೀಡಿತ್ತು. ಆದರೆ ರಾಜ್ಯ ಸರ್ಕಾರ ಖಾಸಗಿ ಶಾಲೆಗಳು ಶೇ.30 ರಷ್ಟು ಶುಲ್ಕ ಕಡಿತಗೊಳಿಸಬೇಕು ಎಂದು ಆದೇಶಿಸಿರುವ ಹಿನ್ನೆಲೆ ನಾಳೆ ಕರೆ ನೀಡಿದ್ದ ಪ್ರತಿಭಟನೆಯನ್ನ ವಾಪಸ್ ಪಡೆದಿದ್ದಾರೆ.

Key words:  official order- state government – 30 percent -reduction -private schools.