ಅ.5ರಂದು ಕಬ್ಬುಬೆಳೆಗಾರರಿಂದ ವಿಧಾನಸೌಧಕ್ಕೆ ಮುತ್ತಿಗೆ- ರೈತ ಮುಖಂಡ ಕುರುಬೂರು ಶಾಂತಕುಮಾರ್.

ಮೈಸೂರು,ಸೆಪ್ಟಂಬರ್,30,2021(www.justkannada.in): ಕಬ್ಬುಬೆಳೆಗಾರರ ಶೋಷಣೆ ಖಂಡಿಸಿ ಅಕ್ಟೋಬರ್ 5ರಂದು ಕಬ್ಬುಬೆಳೆಗಾರರಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಬೃಹತ್ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ಕಬ್ಬಿನ ಎಫ್ ಆರ್ ಪಿ ದರ ನಿಗಧಿ ಮಾಡಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ರೈತರಿಗೆ ಅನ್ಯಾಯ ಮಾಡ್ತಿದೆ. ಸಕ್ಕರೆ ಇಳುವರಿ, ತೂಕ ಹಾಗೂ ಹಣ ನೀಡುವಲ್ಲಿ ಮೋಸ ಆಗ್ತಿದೆ. ಕಬ್ಬು ಬೆಳಗಾರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನ ವಂಚಿಸುತ್ತಿವೆ ಎಂದು ಆರೋಪಿಸಿದರು.special-package-announcement-cm-bs-yeddyurappa-farmer-leader-kuruburu-shanthakumar

ರೈತರ ಆದಾಯವನ್ನ ಡಬಲ್ ಮಾಡ್ತಿನಿ‌ ಅಂತ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಕನಿಷ್ಠ ಉತ್ಪಾದನಾ ವೆಚ್ಚ ನೀಡುವಲ್ಲಿ ವಿಫಲವಾಗಿದೆ. ಹಾಗಾಗಿ ಸರ್ಕಾರದ ವೈಫಲ್ಯಗಳ ಖಂಡಿಸಿ ಅಕ್ಟೋಬರ್ 5ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಳ್ಳಿ ಹಳ್ಳಿಗಳಿಂದ ಕಬ್ಬುಬೆಳೆಗಾರರು‌ ಹೋರಾಟಕ್ಕೆ ಬರುವಂತೆ ಕುರುಬೂರು ಶಾಂತಕುಮಾರ್ ಕರೆ ನೀಡಿದರು.

Key words: oct 5th-vidhanasoudha-farmer leader-Kuruburu Shanthakumar-mysore