ಈಗ ಯುಪಿಎ ಸರ್ಕಾರ ಇದ್ದಿದ್ರೆ ಭಾರತೀಯರ ಬದಲಿಗೆ ತಾಲಿಬಾನಿಗಳನ್ನು ಭಾರತಕ್ಕೆ ಕರೆತರುತ್ತಿತ್ತು- ನಳೀನ್ ಕುಮಾರ್ ಕಟೀಲ್

ಮಂಡ್ಯ,ಆಗಸ್ಟ್,25,2021(www.justkannada.in): ಇಂದು ಇಡೀ ವಿಶ್ವವೇ ಭಾರತದ ಕಡೆ ನೋಡುತ್ತಿದೆ. ಇಂದು ಎಲ್ಲರೂ ಅಫ್ಘಾನಿಸ್ತಾನದ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಯುಪಿಎ ಸರ್ಕಾರ ಇದ್ದಿದ್ದರೆ ಭಾರತೀಯರ ಬದಲಿಗೆ ತಾಲಿಬಾನಿಗಳನ್ನು ಭಾರತಕ್ಕೆ ಕರೆತರುತ್ತಿತ್ತು. ಮೋದಿ ಇರುವುದರಿಂದ ಭಾರತೀಯರನ್ನು ಕರೆತರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು  ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಮಂಡ್ಯ ಪರಿವರ್ತನೆಗೆ ನಾಂದಿ ಹಾಡಿರುವ ಜಿಲ್ಲೆ. ಇಲ್ಲಿ ಗೂಂಡಾಗಿರಿ, ಕುಟುಂಬ, ಜಾತಿಕಾರಣ ನೋಡಿದ್ದೆವು. ಅದಕ್ಕೆಲ್ಲ ಅಂತ್ಯವಾಡಲು ಇಂದಿನ ಸಭೆಯಲ್ಲಿ ಸಂಕಲ್ಪವಾಗಲಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಲ್ಲ. ಯಾರೇ ಅಕ್ರಮ ಗಣಿಗಾರಿಕೆಯಲ್ಲಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬಿ.ಎಸ್.ಯಡಿಯೂರಪ್ಪ ಇದ್ದಾಗ ಮೈಶುಗರ್ ​ಗೆ ಸಾಕಷ್ಟು ಅನುದಾನ ಕೊಟ್ಟಿದ್ದರು. ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

Key words: Now –UPA- government – bringing – Taliban-BJP-president-Naleen Kumar Kateel