ನ.14ರಿಂದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ: ಸರಳ ಆಚರಣೆಗೆ ಸಚಿವ ಎಸ್.ಟಿ ಸೋಮಶೇಖರ್ ಸಲಹೆ….

ಬೆಂಗಳೂರು. ಅಕ್ಟೋಬರ್,14,2020(www.justkannada.in): 67 ನೇ ಅಖಿಲ ಭಾರತ ಸಹಕಾರ ಸಪ್ತಾಹ ನವಂಬರ್ 14 ರಿಂದ ನವಂಬರ್ 20 ರ ವರೆಗೆ ರಾಜ್ಯದಾದ್ಯಂತ ನಡೆಯಲಿದ್ದು,  ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್  ಅವರು ತಿಳಿಸಿದರು.jk-logo-justkannada-logo

ಬೆಂಗಳೂರಿನಲ್ಲಿ ಇಂದು ನಡೆದ 67 ನೇ ಅಖಿಲ ಭಾರತ ಸಹಕಾರ ಸಪ್ತಾಹ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಭಾರತ ಸಹಕಾರ ಸಪ್ತಾಹವನ್ನ ನವೆಂಬರ್ 14 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. ವಿವಿಧ ಸಹಕಾರ ಮಹಾಮಂಡಳಗಳು. ರಾಜ್ಯದ ಎಲ್ಲಾ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ  ಮಾರ್ಗದರ್ಶನದಲ್ಲಿ ಕ್ರಮವಾಗಿ ಮಂಗಳೂರು. ದಾವಣಗೆರೆ. ಚಿಕ್ಕಬಳ್ಳಾಪುರ. ಬೆಳಗಾವಿ. ಹೊಸಪೇಟೆ ಮತ್ತು ಸಮಾರೋಪ ಸಮಾರಂಭವನ್ನು ವಿಜಾಪುರದಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರ ವಲಯದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿರುವ ಐದು ಜನ ಸಹಕಾರಿಗಳನ್ನು ಹಾಗೂ ಸಹಕಾರ ಇಲಾಖೆಯ ಒಬ್ಬ ನಿವೃತ್ತ ಅಧಿಕಾರಿಯನ್ನ ಸಮಿತಿ ಮೂಲಕ ಆಯ್ಕೆ ಮಾಡಿ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್  ಮಾಹಿತಿ ನೀಡಿದರು.

ಕಾಯ೯ಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕೇಂದು ಸಲಹೆ ನೀಡಿದ ಸಚಿವ ಎಸ್.ಟಿ ಸೋಮಶೇಖರ್, ಸಹಕಾರ ಸಂಘಗಳಿಗೆ ಸಂಬಂಧಿಸಿದ ಕಾಯ್ದೆ ತಿದ್ದುಪಡಿ ಮಾಡಲು ಕ್ರಮವಿಡಲಾಗವುದು. ಇದರಿಂದ ಎಲ್ಲರಿಗೂ ಅನುಕೂಲವಾಗುವಂತಾಗಬೇಕು. ಇಲಾಖೆಯ ಬಲವರ್ಧನೆಗೆ ಅಧಿಕಾರಿಗಳು ಉತ್ತಮ ಗುಣಮಟ್ಟದ ಕೆಲಸ ಮಾಡಬೇಕೇಂದರು ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಆಥಿ೯ಕವಾಗಿ ದುರ್ಬಲರಾದ ಜನರಿಗೆ ನೆರವು ನೀಡುವ ಆಥಿ೯ಕ ಸ್ಪಂದನ ಕಾಯ೯ಕ್ರಮ ಮೂಲಕ 39300 ಕೋಟಿ ನೆರವು ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಧಾರವಾಡ. ಬೀದರ ನಲ್ಲಿ ಕಾಯ೯ಕ್ರಮ ಆಯೋಜಿಸಲಾಗುತ್ತಿದೆ.  ಕೆ. ಎಂ. ಎಫ್ ಬಲವಧ೯ನಗೆ ಎಲ್ಲಾ ರೀತಿಯ ನೆರವು ಸರ್ಕಾರ ನೀಡುತ್ತಲೇ ಬಂದಿದೆ ಎಂದು ತಿಳಿಸಿದರು.november-14-67th-all-india-cooperative-saptha-minister-st-somashekhar

ಶಾಸಕ ಜಿ. ಟಿ. ದೇವೇಗೌಡ. ಸಹಕಾರ ಇಲಾಖಾ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್. ಸಹಕಾರ ಸಂಘಗಳ ನಿಬಂಧಕ ಎಸ್ ಜಿಯಾವುಲ್ಲಾ ಮಾರಾಟ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್. ಸೌಹಾಧ೯ ಸಹಕಾರಿ ಅಧ್ಯಕ್ಷ ಬಿ. ಎಚ್. ಕೃಷ್ಣಾರೆಡ್ಡಿ ಸೇರಿದಂತೆ ಸಹಕಾರಿ ಮುಖಂಡರು. ಅಧಿಕಾರಿಗಳು ಉಪಸ್ಥಿತರಿದ್ದರು.

Key words: November 14 – 67th All India Cooperative Saptha-Minister -ST Somashekhar