ಸಿದ್ಧರಾಮಯ್ಯ ವಿಪಕ್ಷ ನಾಯಕನಾಗಿ ಇಂಥ ಆರೋಪಗಳು ಸರಿಯಲ್ಲ – ಸಿಎಂ ಬೊಮ್ಮಾಯಿ ಅಸಮಾಧಾನ.

ಹುಬ್ಬಳ್ಳಿ,ಡಿಸೆಂಬರ್,7,2021(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳು ಹೇಳುತ್ತಾರೆ ಎಂದು ಟೀಕಿಸಿದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ  ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ಧರಾಮಯ್ಯ ವಿಪಕ್ಷ ನಾಯಕನಾಗಿ ಇಂಥ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಮೇಲೆ ಬಹಳ ಗೌರವ ಇತ್ತು. ಆದರೆ ಇತ್ತೀಚೆಗೆ ಅವರ ಹೇಳಿಕೆಗಳಿಂದ ನಿರಾಸೆಯಾಗಿದೆ. ಸಿದ್ದರಾಮಯ್ಯ ಓರ್ವ ಮಾಜಿ ಸಿಎಂ, ವಿಪಕ್ಷ ನಾಯಕನಾಗಿ ಇಂಥ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕೊರೋನಾ ಮೂರನೇ ಅಲೆ ಒಮಿಕ್ರಾನ್ ತಡೆಗಟ್ಟಲು ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಟೆಸ್ಟ್ ವರದಿ ಬರುವಂತೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇನ್ನು ಒಮಿಕ್ರಾನ್ ವೇಗವಾಗಿ ಹರಡುತ್ತೆ ಆದರೆ ತೀವ್ರತೆ ಕಡಿಮೆ ಎಂಬ ಮಾಹಿತಿ ಇದೆ. ಜನರು ಎಚ್ಚರದಿಂದ ಇರುವುದು ಅಗತ್ಯ  ಎಂದು ಬೊಮ್ಮಾಯಿ ತಿಳಿಸಿದರು.

Key words: not right -such -allegations – Siddaramaiah -CM –basavaraj Bommai

ENGLISH SUMMARY…

Being the opposition leader Siddaramaiah should not make such allegations: CM Bommai
Hubballi, December 7, 2021 (www.justkannada.in): Reacting to the Opposition leader Siddaramaiah’s allegations that the Chief Minister Basavaraj Bommai tells lies, the latter today said that it is not correct for Siddaramaiah to make such allegations being the opposition leader.
Speaking with the media persons at Hubballi today the Chief Minister Basavaraj Bommai said that “I had a lot of respect on Siddaramaiah. But of late I am upset because of the statements he is giving. Siddaramaiah is a former Chief Minister and the present leader of the opposition. It is incorrect for him to make such allegations,” he said.
Replying to the question on the Omicron virus, the Chief Minister said that his government has made all preparations. He also informed that, according to the experts the Omicron virus though spreading faster is less harmful. However, he asked the people to be careful and follow COVID appropriate behavior.
Keywords: Chief Minister Basavaraj Bommai/ Siddaramaiah/ allegations/ incorrect