ಸ್ಪೀಕರ್ ವಿವೇಚನಾಧಿಕಾವನ್ನು ನಾವು ಪ್ರಶ್ನಿಸುವುದಿಲ್ಲ-ಸುಪ್ರೀಂಕೋರ್ಟ್ ಅಭಿಪ್ರಾಯ: ಅತೃಪ್ತ ಶಾಸಕರ ಪರ ಮುಕುಲ್ ರೋಹ್ಟಗಿ ವಾದ ಮಂಡನೆ…

kannada t-shirts

ನವದೆಹಲಿ,ಜು,16,2019(www.justkannada.in):  ಶಾಸಕರ ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ತೀರ್ಮಾನಿಸುವ ಹಕ್ಕು ಸ್ಪೀಕರ್ ಇದೆ. ಸ್ಪೀಕರ್ ವಿವೇಚನಾಧಿಕಾವನ್ನು ನಾವು ಪ್ರಶ್ನಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸಿಜೆ ರಂಜನ್ ಗೋಗಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆ ಅಂಗೀಕಾರ ವಿಳಂಬ ಧೋರಣೆ ಪ್ರಶ್ನಿಸಿ ಸ್ಪೀಕರ್ ವಿರುದ್ದ  ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ಸಿಜೆ ರಂಜನ್ ಗೋಗಯ್ ನೇತೃತ್ವದಲ್ಲಿ ನಡೆಯುತ್ತಿದೆ. ವಿಚಾರಣೆ ವೇಳೆ ಅತೃಪ್ತ ಶಾಸಕರ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ,  ಕೈಬರಹದ ಮೂಲಕ ನಿಯಮಾವಳಿ ಪ್ರಕಾರ ರಾಜೀನಾಮೆ ನೀಡಿದ್ದಾರೆ.   ರಾಜೀನಾಮೆ ಅಂಗೀಕಾರ ವಿಳಂಬ ಮಾಡುವಂತಿಲ್ಲ. ಸ್ವ ಇಚ್ಚೆ ಮತ್ತು ಸತ್ಯ ಎರಡೇ ರಾಜೀನಾಮೆ ಅಂಗೀಕಾರಕ್ಕೆ ಪ್ರಮುಖ ಮಾನದಂಡ ಎಂದು ಕೋರ್ಟ್ ಗೆ ವಿವರಣೆ ನೀಡಿದರು.

ರಾಜೀನಾಮೆ ಪ್ರಕರಣ ಇಂದೇ ಇತ್ಯರ್ಥ ಮಾಡಲು ರೋಹಟಗಿ ಮನವಿ ಮಾಡಿದರು. ಶಾಸಕರ ಹಕ್ಕನ್ನು ಸ್ಪೀಕರ್ ತಡೆಯುವಂತಿಲ್ಲ. ಕಲಂ ೧೯೧/೨ಪ್ರಕಾರ ರಾಜೀನಾಮೆ ಶಾಸಕರ‌ ಹಕ್ಕಾಗಿರುತ್ತದೆ. ಪಕ್ಷದ ಶಿಸ್ತು ಉಲ್ಲಂಘಿಸಿದರೆ ಅದು ಸದನದ ಹೊರಗಿನ ವಿಷಯವಾಗಲಿದೆ .ನಿಯಮಾನುಸಾರ ರಾಜೀನಾಮೆ ಸಲ್ಲಿಸಲಾಗಿದೆ. ಅನರ್ಹತೆಗೆ ಯಾವುದೇ ಕಾರಣಗಳಿಲ್ಲ ಎಂದು ಸುಪ್ರೀಂ ಗೆ ಮುಕುಲ್ ರೋಹ್ಟಗಿ ಹೇಳಿದರು.

ಕರ್ನಾಟಕ ವಿಧಾನಸಭೆ ನಿಯಮಾವಳಿ ಓದಿದ ವಕೀಲ ರೋಹ್ಟಗಿ, ರಾಜೀನಾಮೆ ಹಿಂಪಡೆಯಲು ಒತ್ತಡ ಹೇರಿ ಸರ್ಕಾರ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಶಾಸಕರನ್ನು ಹೆದರಿಸಲು ಮತ್ತು ರಾಜೀ ಮಾಡಲು ಅನರ್ಹತೆ ‌ವಿಷಯ ಪ್ರಸ್ತಾಪಿಸಲಾಗಿದೆ. ರಾಜೀನಾಮೆ‌ ‌ನೀಡಿರುವ ಶಾಸಕರು‌ ಅನರ್ಹವಾಗುವ ತಪ್ಪು ‌ಮಾಡಿಲ್ಲ. ಸ್ಪೀಕರ್ ‌ಸರ್ಕಾರ ಉಳಿಸುವ ಪ್ರಯತ್ನ ಮಾಡಿದ್ದಾರೆ. ಅನರ್ಹತೆ ‌ಮಾಡಲು ಯಾವುದೇ ಸ್ಪಷ್ಟ ಕಾರಣಗಳಿಲ್ಲ. ಯಾವುದೇ ಕಾರಣ‌ ನೀಡದೆ ಶಾಸಕರು ರಾಜೀನಾಮೆ‌ ನೀಡಬಹುದು ಎಂದು ವಾದ ಮಂಡಿಸಿದರು.

ಈ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ , ಸ್ಪೀಕರ್ ವಿವೇಚನಾಧಿಕಾವನ್ನು ನಾವು ಪ್ರಶ್ನಿಸುವುದಿಲ್ಲ. ಶಾಸಕರ ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ತೀರ್ಮಾನಿಸುವ ಹಕ್ಕಿದೆ. ಸ್ಪೀಕರ್ ವ್ಯಾಪ್ತಿಗೆ ನಾವು ಪ್ರವೇಶಿಸುವುದಿಲ್ಲ ಎಂದು ಹೇಳಿದೆ.

ನಂತರ ವಾದ ಮುಂದುವರೆಸಿದ ಮುಕುಲ್ ರೋಹ್ಟಗಿ, ಆರ್ಟಿಕಲ್ 190 ರ ಅನ್ವಯ ಕೈ ಬರಹದಲ್ಲಿ ಶಾಸಕರು ರಾಜೀನಾಮೆ ಕೊಟ್ಟಿದ್ದರೆ. ಬೇರೆ ವಿಚಾರ ಉಲ್ಲೇಖಿಸದಿದ್ದರೆ ರಾಜೀನಾಮೆ ಅಂಗೀಕರಿಸದೆ ಇಟ್ಟುಕೊಳ್ಳುವಂತಿಲ್ಲ. ಸ್ಪೀಕರ್ ಪಕ್ಷಪಾತ ಧೋರಣೆ ಅನುಸರಿಸುತಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ವಿಚಿತ್ರ ವರ್ತನೆ. ಸುಪ್ರೀಂ ‌ಮುಂದೆ ಶಾಸಕರು ರಾಜೀನಾಮೆ ಕೊಟ್ಟಿರುವ ಮತ್ತು ಅಂಗೀಕರಿಸದಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.

ರಾಜೀನಾಮೆ ಗೂ ಮುನ್ನ ಅನರ್ಹತೆ ಅರ್ಜಿ ಪರಿಗಣಿಸುವ ನಿಯಮವಿದೆಯಾ? ಸ್ಪೀಕರ್ ಮೇಲೆ ಸಂವಿಧಾನದ ಕಟ್ಟಳೆಗಳಿವೆಯೇ?  ಎಂದು ಸಿಜೆಐ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಕುಲ್ ರೋಹ್ಟಗಿ ನಿಯಮಾವಳಿ ಪ್ರಕಾರ ರಾಜೀನಾಮೆ ಗೆ ಕಾರಣ ತಿಳಿಸಬೇಕಿಲ್ಲ.  ಹೀಗಿದ್ದರೂ ಸ್ಪೀಕರ್ ಕಾರಣ ಹುಡುಕುವ ಅಥವಾ ಕೇಳುವ ಔಚಿತ್ಯ ಏನು? ಎಂದು ವಾದ ಮಂಡಿಸಿದರು.

Key words: not question -Speaker’s- discretionSupreme Court-  Mukul Rohtagi -argues

website developers in mysore