ವಾಹನಗಳ ಮೇಲೆ ಉನ್ನತ ಭದ್ರತಾ ಸಂಖ್ಯಾ ಫಲಕಗಳ ಪರಿಶೀಲನೆ ಕುರಿತ ದೂರುಗಳಗೆ ಸಂಚಾರಿ ಪೊಲೀಸರ ಸ್ಪಷ್ಟನೆ

kannada t-shirts

 

ಬೆಂಗಳೂರು, ಅಕ್ಟೋಬರ್ ೨, ೨೦೨೧ (www.justkannada.in): ಸಂಚಾರಿ ಪೊಲೀಸ್ ಇಲಾಖೆ ಇನ್ನೂ ಕಡ್ಡಾಯಗೊಳಿಸದೇ ಇದ್ದರೂ ಸಹ ಸಂಚಾರ ವಿಭಾಗದ ಪೊಲೀಸರು ವಾಹನಗಳ ಉನ್ನತ ಭದ್ರತಾ ಸಂಖ್ಯಾ ಫಲಕಗಳನ್ನು ಪರಿಶೀಲಿಸಲು (High Security Registration Plates (HSRPs)) ಆರಂಭಿಸಿರುವುದು ಜನಸಾಮಾನ್ಯರಲ್ಲಿ ಆಕ್ರೋಶ ಮೂಡಿಸಿದೆ.

ಎಲ್ಲೆಂದರಲ್ಲಿ ವಾಹನಗಳನ್ನು ‘ನೋ ಪಾರ್ಕಿಂಗ್’ನಲ್ಲಿ ನಿಲ್ಲಸಲಾಗಿದೆ ಎಂಬ ಕಾರಣ ನೀಡಿ ಠಾಣೆಗೆ ತೆಗೆದುಕೊಂಡು ಹೋಗುವ ಪ್ರಕ್ರಿಯೆ ಇತ್ತೀಚೆಗೆ ಸಾರ್ವಜನಿಕರನ್ನು ಕೆರಳಿಸಿತ್ತು. ಅದರ ಬೆನ್ನಲ್ಲೇ ಭದ್ರತಾ ಸಂಖ್ಯಾ ಫಲಕಗಳ ತಪಾಸಣೆ ಸಾರ್ವಜನಿಕರ ಆಕ್ರೋಶವನ್ನು ವೃದ್ಧಿಸಿದ್ದು, ಹೆಚ್‌ಎಸ್‌ಆರ್‌ಪಿ ಕುರಿತಂತೆ ಸಂಚಾರಿ ಪೊಲೀಸರು ಯಾವ ರೀತಿ ಸಾರ್ಜಜನಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರಿಂದ ದೂರುಗಳ ಸುರಿಮಳೆ ಆರಂಭವಾಗಿದೆ.

ಈ ಕುರಿತಂತೆ ಸಂಚಾರ ಇಲಾಖೆಯು ತನ್ನ ಟ್ವಿಟ್ಟರ್ ಪುಟದಲ್ಲಿ ಸ್ಪಷ್ಟನೆ ನೀಡಿದೆ; ಪ್ರಸ್ತುತ ಹೆಚ್‌ಎಸ್‌ಆರ್‌ಪಿಗಳು ಕೇವಲ ಏಪ್ರಿಲ್ ೨೦೧೯ರ ನಂತರ ನೋಂದಣಿಯಾಗಿರುವ ವಾಹನಗಳಿಗೆ ಮಾತ್ರ ಕಡ್ಡಾಯಗೊಳಿಸಲಾಗಿದ್ದು, ಹಳೆಯ ವಾಹನಗಳಿಗೂ ಕಡ್ಡಾಯಗೊಳಿಸಿ ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ತಿಳಿಸಿದೆ.

ಸಂಚಾರ ಪೊಲೀಸ್ ವಿಭಾಗದ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಅವರು ಈ ಕುರಿತಂತೆ ನೀಡಿರುವ ತಮ್ಮ ಸ್ಪಷ್ಟನೆಯಲ್ಲಿ ಪ್ರಸ್ತುತ ಹೆಚ್‌ಎಸ್‌ಆರ್‌ಪಿಗಳು ಹೊಸ ವಾಹನಗಳಿಗೆ ಮಾತ್ರ ಕಡ್ಡಾಯವಾಗಿದೆ. ಹೆಚ್‌ಎಸ್‌ಆರ್‌ಪಿಗಳ ತಪಾಸಣೆ ಕೇವಲ ಸಂಚಾರ ವಿಭಾಗದ ಪೊಲೀಸರು ಮಾತ್ರವೇ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಆದರೆ ಈ ಕುರಿತಂತೆ ವಾಹನ ಬಳಕೆದಾರರ ಅಭಿಪ್ರಾಯವೇ ಬೇರೆ ಇದೆ. ಟ್ವಿಟ್ಟರ್‌ನ ಒಂದು ದೂರಿನಲ್ಲಿ ಈ ರೀತಿ ಇದೆ: “IND number plates ಇಲ್ಲದಿರುವ ಕಾರಣದಿಂದಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ನಮ್ಮ ವಾಹನವನ್ನು ತಡೆದರು. ಆದರೆ ಅದು ಯಾವಾಗನಿಂದ ಕಡ್ಡಾಯಗೊಳಿಸಲಾಗಿದೆ ಎಂಬುದೇ ನನಗೆ ಗೊತ್ತಿಲ್ಲ?! ಅದಕ್ಕೆ ಕಾಲಾವಕಾಶವನ್ನೇನಾದರೂ ನಿಗಧಪಡಿಸಿರುವರೇ? ಈ ಕುರಿತಂತೆ ಏನಾದರೂ ಸುದ್ದಿ ಇದೆಯೇ?”

ರಾಷ್ಟ್ರದ ಸಂಕ್ಷೇಪವನ್ನು ಹೊಂದಿರುವ ಕಾರಣದಿಂದಾಗಿ ಹೆಚ್‌ಎಸ್‌ಆರ್‌ಪಿ ಎಂದರೆ IND number plates ಎಂದು ಕರೆಯಲಾಗುತ್ತದೆ.
ಈ ಕುರಿತಂತೆ ಮಾತನಾಡಿರುವ ಸಂಚಾರ ಪೊಲೀಸ್ ವಿಭಾಗದ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಅವರು ನಮ್ಮ ಅಧಿಕಾರಿಗಳು ಕೇವಲ ದೋಷಪೂರಕವಾಗಿರುವಂತಹ ನಂಬರ್ ಪ್ಲೇಟ್‌ಗಳಿರುವಂತಹ ವಾಹನಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿದ್ದಾರೆ. “ನಾವು ಕೇವಲ ಅಸಮರ್ಪಕವಾಗಿರುವ, ದೋಷಪೂರಿತವಾದ ಅಥವಾ ನಾನ್-ಸ್ಟಾಡರ್ಡ್ ನಂಬರ್ ಪ್ಲೇಟ್‌ಗಳಿರುವಂತಹ ವಾಹನಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಸೆಕ್ಯೂರಿಟಿ (IND) ನಂಬರ್ ಪ್ಲೇಟ್‌ಗಳ ಮೇಲೆ ಕ್ರಮ ಕೈಗೊಳ್ಳಲು ಕೇವಲ ಸಂಚಾರ ಪೊಲೀಸ್ ಇಲಾಖೆಗೆ ಮಾತ್ರ ಅಧಿಕಾರವಿದೆ. ಈ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳದಿರುವಂತೆ ನಮ್ಮ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ,” ಎಂದು ತಿಳಿಸಿದರು.

ಭಾರತೀಯ ಮೋಟಾರು ವಾಹನಗಳ ಕಾಯ್ದೆಯಡಿ ಹೊರಡಿಸಲಾಗಿರುವಂತಹ ಆದೇಶಗಳಲ್ಲಿ, ವಾಹನಗಳ ಮೇಲಿನ ನಂಬರ್ ಪ್ಲೇಟ್‌ನ ಅಳತೆ, ಫಾಂಟ್ ಗಾತ್ರ ಹಾಗೂ ಸ್ಪಷ್ಟವಾಗಿ ಗೋಚರಿಸುವ ಕುರಿತಂತೆ ಸ್ಪಷ್ಟವಾ ವ್ಯಾಖ್ಯಾನವಿದೆ. ಆ ಮಾರ್ಗಸೂಚಿಗಳನ್ನು ಉಲ್ಲಂಘಿಸಬಾರದು ಎಂದು ತಿಳಿಸುತ್ತದೆ.

ನಂಬರ್ ಪ್ಲೇಟ್‌ಗಳ ಮೇಲೆ ಹೆಸರುಗಳನ್ನು ನಮೂದಿಸುವುದು, ಯಾವುದೇ ರೀತಿಯ ಘೋಷಣೆಗಳು, ಚಿತ್ರಗಳು, ಆರ್ಟ್ವರ್ಕ್ಗಳು ಹಾಗೂ ಫ್ಯಾನ್ಸಿ ಅಕ್ಷರಗಳ ಬಳಕೆಯನ್ನೂ ಸಹ ನಿಷೇಧಿಸುತ್ತದೆ. ವಾಹನಗಳ ನಂಬರ್ ಪ್ಲೇಟ್ ವಾಹನದ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಎರಡೂ ಕಡೆ ಸ್ಪಷ್ಟವಾಗಿ ಕಾಣುವಂತಿರಬೇಕು ಹಾಗೂ ಆಂಗ್ಲ ಅಕ್ಷರಗಳು ಹಾಗೂ ಅರಬಿಕ್ ಅಂಕಿಗಳಲ್ಲಿರಬೇಕು, ಎನ್ನುತ್ತಾರೆ ಅಧಿಕಾರಿ ರವಿಕಾಂತೇಗೌಡ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : not-checking-hi-sec-number-plates-traffic-cops-clarify-after-complaints

website developers in mysore