ನಾವು ಶಿಕ್ಷಣವನ್ನ‌ ಮಾತ್ರ ಬದಲಾವಣೆ ಮಾಡಿಲ್ಲ: ಎಲ್ಲವನ್ನು ಬದಲಾವಣೆ ಮಾಡಿದ್ದೇವೆ- ಸಚಿವ ಬಿ.ಸಿ ನಾಗೇಶ್.

ಮೈಸೂರು,ಮೇ,25,2022(www.justkannada.in): ನಾವು ಶಿಕ್ಷಣವನ್ನ‌ ಮಾತ್ರ ಬದಲಾವಣೆ ಮಾಡಿಲ್ಲ. ಎಲ್ಲವನ್ನು ಬದಲಾವಣೆ ಮಾಡಿದ್ದೇವೆ. ಈ ದೇಶದಲ್ಲಿ ವಾಜಪೇಯಿ ಸರ್ಕಾರ ಬರುವವರೆಗು ಅಂತರಾಜ್ಯ ರಸ್ತೆ ಇರಲಿಲ್ಲ. ನಾವು ರಸ್ತೆಯನ್ನು ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆಯು ಮಾತನಾಡಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದರು. ಉಭಯ ಕುಶಲೋಪರಿ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿದರು. ಶ್ರೀಗಳ 80ನೇ ವರ್ಷದ ವರ್ಧಂತ್ಯುತ್ಸವ ಹಿನ್ನೆಲೆ ಸಚಿವ ಬಿ.ಸಿ ನಾಗೇಶ್ ಶುಭಕೋರಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ. ಬಿ.ಸಿ ನಾಗೇಶ್, ಪಠ್ಯ ಪುಸ್ತಕದ ಮೇಲೆ ಮಾತನಾಡುತ್ತಿರುವವರು ವಿಷಯದ ಮೇಲೆ ಮಾತನಾಡುತ್ತಿದ್ದಾರಾ? ರಾಜಕೀಯದ ಮೇಲೆ ಮಾತನಾಡುತ್ತಿದ್ದಾರಾ? ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದ್ರೆ ಅದು ವಿರೋಧವಲ್ಲ. ಆಗಾ ಒಂದೇ ಪಂಥದ ಪಠ್ಯ ಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ. ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿದೆ. ನಮ್ಮ ಇಚ್ಚೆ ಪಂಥದಲ್ಲ. ನಾವು ಎಲ್ಲವನ್ನು ಒಪ್ಪಿ ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ. ಬಿಜೆಪಿ ಪಠ್ಯ ಸಂಸ್ಕರಣಾ ಮಾಡುತ್ತಿದ್ದಂತೆ. ನಿಮಗೆ ಚಾತುರ್ ವರ್ಣ ಎಲ್ಲ ನೆನಪಾಗುತ್ತಿದೆ. ವಾಜಪೇಯಿ ಪ್ರಧಾನಿ ಆಗುವ ಮೊದಲು ಅಮೇರಿಕಾ ಹೇಳಿದಂತೆ ನಡೆಯುತ್ತಿತ್ತು.

ಈ ದೇಶದಲ್ಲಿ ಯಾವಾಗ ಯುದ್ಧ ಆಗಬೇಕು ಎಂಬುದನ್ನು ಅಮೇರಿಕಾ ತೀರ್ಮಾನ ಮಾಡುತ್ತಿತ್ತು. ಆದರೆ ವಾಜಪೇಯಿ ಕಾರ್ಗೀಲ್ ಯುದ್ಧದಲ್ಲಿ ಕೊನೆ ಸೈನಿಕ ಹೋರಾಡುವವರೆಗೆ ಯಾರ ಜೊತೆ ಮಾತಾಡಲ್ಲ ಅಂದಿದ್ರು. ಕಾಂಗ್ರೆಸ್ ಯಾರ್ ಯಾರಿಗೋ ರಾಜಿ ಮಾಡಿಕೊಂಡು ರಾಜಕೀಯ ಮಾಡಿದೆ. ಆದರೆ ನಾವು ರಾಜಕೀಯ ಮಾಡಿರೋದು ಈ ಜನರಿಗಾಗಿ ಈ ನೆಲಕ್ಕಾಗಿ, ಇಲ್ಲಿನ ಸಂಸ್ಕೃತಿಗಾಗಿ. ಬೇರೆ ದೇಶಗಳಲ್ಲಿ ನಮಗೆ 400-500 ವರ್ಷಗಳ ಇತಿಹಾಸ ಇಲ್ಲ. ಭಾರತಕ್ಕೆ 5-6 ಸಾವಿರ ವರ್ಷಗಳ ಇತಿಹಾಸ ಇದೆ. ನಾವು ಜ್ಞಾನ ಇಟ್ಟುಕೊಂಡು ಬೇರೆ ದೇಶಕ್ಕೆ ಹೋದವರು. ಬೇರೆಯವರಂತೆ ಪಿಸ್ತೂಲ್, ಕತ್ತಿ ಹಿಡಿದುಕೊಂಡು ಬಂದವರಲ್ಲ ಎಂದು ಬಿಸಿ ನಾಗೇಶ್ ತಿಳಿಸಿದರು.

Key words: not changed- only -education All –changed- Minister -BC Nagesh.