ರಾಜ್ಯದಲ್ಲಿ ಸಿಎಂ ಬಿಎಸ್ ವೈ ಕೆಳಗಿಳಿಸಲು ಅವರಿಗೆ ಸಮರ್ಥ ನಾಯಕರೇ ಸಿಗ್ತಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ವ್ಯಂಗ್ಯ.

kannada t-shirts

ಹುಬ್ಬಳ್ಳಿ,ಮೇ,28,2021(www.justkannada.in): ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಬೀದಿ ಕಾಳಗ ನಡೆಯುತ್ತಿದೆ. ಅವರ ಪಕ್ಷದವರೇ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧವಾಗಿ ಮಾತನಾಡಿದ್ದಾರೆ.  ಸಿಎಂ ಬಿಎಸ್ ವೈರನ್ನ ಕೆಳಗಿಳಿಸಲು ಹೈಕಮಾಂಡ್ ಗೆ ರಾಜ್ಯದಲ್ಲಿ ಸಮರ್ಥ ನಾಯಕರು ಸಿಗುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಲೇವಡಿ ಮಾಡಿದರು.jk

ರಾಜ್ಯದಲ್ಲಿ ಸಿಎಂ, ನಾಯಕತ್ವ ಬದಲಾವಣೆ ವಿಚಾರ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿ ಎಸ್ ಯಡಿಯೂರಪ್ಪ ಸಿಎಂ ಆಗಿ ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. . ಅವರ ಪಕ್ಷದ ಶಾಸಕರೇ ಯಡಿಯೂರಪ್ಪ ವಿರುದ್ಧವಾಗಿ ಮಾತನಾಡಿದ್ದಾರೆ. ಕೊರೋನಾ ಹಿನ್ನೆಲೆ ಹಾಗೂ ರಾಜ್ಯದಲ್ಲಿ ಸಮರ್ಥ ನಾಯಕರು ಸಿಗದ ಕಾರಣ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನೇ ಸಿಎಂ ಆಗಿ ಮುಂದುವರೆಸಿದೆ ಎಂದು ಟೀಕಿಸಿದರು.

ಹಾಗೆಯೇ  ಸಚಿವರೊಬ್ಬರ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿಯೇ ಆರೋಪ ಮಾಡಿದ್ದಾರೆ. ಸಚಿವ ಯೋಗೇಶ್ವರ್ ವಿರುದ್ಧ ಲೂಟಿ ಮಾಡಿರುವ ಆರೋಪವನ್ನ ಎಂ.ಪಿ ರೇಣುಕಾಚಾರ್ಯ ಮಾಡಿದ್ದಾರೆ. ಅರಣ್ಯ ಸಚಿವರಾಗಿದ್ದಾಗ ಸಿಪಿ ಯೋಗೇಶ್ವರ್ ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದರು.

ಕೊರೊನಾ ಎದುರಿಸಲು ಸರ್ಕಾರ ಬೇಕಾದ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ. ಆಕ್ಸಿಜನ್ , ಬೆಡ್, ಐಸಿಯು ಬೇಕಿತ್ತು. ಆದರೆ ಸರ್ಕಾರ ಯಾವುದನ್ನೂ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: not capable- leaders – change- CM BS yeddyurappa – state-Former CM- Siddaramaiah

website developers in mysore