‘ನೋ ವ್ಯಾಕ್ಸಿನೇಷನ್-ನೋ ರೇಷನ್, ನೋ ಪೆನ್ಷನ್’ : ಚಾಮರಾಜನಗರ ಜಿಲ್ಲಾಧಿಕಾರಿಯ ಆದೇಶಕ್ಕೆ ಆಕ್ರೋಶ.

ಚಾಮರಾಜನಗರ,ಸೆಪ್ಟಂಬರ್,1,2021(www.justkannada.in):  ಕೊರೋನಾ ಲಸಿಕೆ ಪಡೆಯದಿರುವ ಜನರಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ಶಾಕ್ ನೀಡಿದ್ದಾರೆ.

ಹೌದು ಸೆಪ್ಟೆಂಬರ್‌ 1 ರಿಂದ ನೋ ವ್ಯಾಕ್ಸಿನೇಷನ್‌ – ನೋ ರೇಷನ್, ನೋ ವ್ಯಾಕ್ಸಿನೇಷನ್‌ – ನೋ ಪೆನ್ಷನ್‌ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ಮುಂದಾಗಿದ್ದಾರೆ. ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರೀಕ್ಷಿತ ಗುರಿ ತಲುಪದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 1 ರಿಂದ ಲಸಿಕೆ ಪಡೆಯದಿದ್ದರೆ ಪಡಿತರ, ಪಿಂಚಣಿ ತಡೆ ಹಿಡಿಯುವ ತೀರ್ಮಾನವನ್ನ ಚಾಮರಾಜನಗರ ಡಿಸಿ ಎಂಆರ್ ರವಿ ಕೈಗೊಂಡಿದ್ದಾರೆ ಎನ್ನಲಾಗಿದೆ. ವ್ಯಾಕ್ಸಿನೇಷನ್ ಪ್ರಮಾಣಪತ್ರ ತಂದರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಆರ್. ರವಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Key words: No vaccination — no ration,-no pension- Outrage -Chamarajanagar –DC- order.