ಬಜೆಟ್ ನಲ್ಲಿ ಅನ್ನಭಾಗ್ಯ ಯೋಜನೆಗೆ ತೊಂದರೆ ಇಲ್ಲ: ರೇಷನ್ ಕಾರ್ಡ್ ಜತೆ ಆಧಾರ್ ಕಾರ್ಡ್ ಜೋಡಿಸಬೇಕು – ಸಚಿವ ಗೋಪಾಲಯ್ಯ ಹೇಳಿಕೆ …

ಬೆಂಗಳೂರು,ಫೆ,25,2020(www.justkannada.in):  ಬಜೆಟ್ ನಲ್ಲಿ ಅನ್ನಭಾಗ್ಯ ಯೋಜನೆಗೆ ಯಾವುದೇ ತೊಂದರೆ ಇರಲ್ಲ. ಈ ನಡುವೆ ಬಿಪಿಎಲ್ ಕಾರ್ಡ್ ಪಡೆದಿರುವ ಅನರ್ಹರು ಕಾರ್ಡ್ ವಾಪಸ್ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ತಿಳಿಸಿದರು.

ವಿಕಾಸಸೌಧದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಆಹಾರ ಸಚಿವ ಗೋಪಾಲಯ್ಯ, ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರಿಗೆ ಎರಡು ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ಎರಡು ತಿಂಗಳೊಳಗೆ ಅನರ್ಹ ಬಿಪಿಎಲ್ ಕಾರ್ಡುದಾರರು ಕಾರ್ಡ್ ಅನ್ನ ವಾಪಸ್ ನೀಡಬೇಕು. ಈಗಾಗಲೇ 63 ಸಾವಿರ ಜನರಿಂದ 96 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಹೀಗಾಗಿ ಬಿಪಿಎಲ್ ಕಾರ್ಡ್ ಪಡೆದಿರುವ ಅನರ್ಹರು ವಾಪಸ್ ನೀಡಿ ಎಂದು ಹೇಳಿದರು.

ರೇಷನ್ ಕಾರ್ಡ್ ಜತೆ ಆಧಾರ್ ಕಾರ್ಡ್ ಜೋಡಿಸಬೇಕು. ರಾಜ್ಯದಲ್ಲಿ 10,94,160 ಅಂತ್ಯೋದಯ ಪಡಿತರ ಚೀಟಿ ಇದೆ. 1,15,98234 ಎಪಿಎಲ್ ಕಾರ್ಡುಗಳಿವೆ.  ವಿವಿಧ ಕಾರಣಗಳಿಂದ ಕಳೆದ 1 ವರ್ಷದಲ್ಲಿ 1ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗಿವೆ.   2.17 ಬಿಪಿಎಲ್ ಕಾರ್ಡ್ ಹಾಗೂ 1.15 ಲಕ್ಷ ಎಪಿಎಲ್ ಕಾರ್ಡ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎರಡು ತಿಂಗಳುಗಳಲ್ಲಿ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

ಬಜೆಟ್ ನಲ್ಲಿ ಅನ್ನಭಾಗ್ಯ ಯೋಜನೆಗೆ ಯಾವುದೇ ತೊಂದರೆ ಇಲ್ಲ. ಯಾವುದೇ ಸಂಸ್ಥೆಗಳಿಗೆ ಪಡಿತರ ವಿತರಣೆ ನಿಲ್ಲಿಸುವುದಿಲ್ಲ ಎಂದು ಗೋಪಾಲಯ್ಯ ಮಾಹಿತಿ ನೀಡಿದರು.

Key words: no problem –annabhagya plan-budget- Aadhaar card -ration card-Minister Gopalaiah…