ಯಾವ ಪುರುಷಾರ್ಥಕ್ಕೆ ನೈಟ್ ಕರ್ಫ್ಯೂ…? ಹುಡುಗಾಟಿಕೆಗೆ ಕೆಲಸ ಮಾಡಬೇಡಿ-ಸರ್ಕಾರದ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಕಿಡಿ..

ರಾಮನಗರ,ಡಿಸೆಂಬರ್,24,2020(www.justkannada.in):   ಕೊರೋನಾ ರೂಪಾಂತರ ಹಿನ್ನೆಲೆ ರಾಜ್ಯ ಸರ್ಕಾರ  ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಇದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಈ ಕುರಿತು ಇದೀಗ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಹ ವಾಗ್ದಾಳಿ ನಡೆಸಿದ್ದಾರೆ.Teachers,solve,problems,Government,bound,Minister,R.Ashok

ರಾಮನಗರದ ಕೇತಗಾನಹಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನೈಟ್  ಕರ್ಫ್ಯೂ ಅಂದ್ರೆ ಏನು…? ಯಾವ ಪುರುಷಾರ್ಥಕ್ಕೆ ನೈಟ್ ಕರ್ಫ್ಯೂ ಜಾರಿ ಮಾಡಿದ್ದೀರಾ…? ಎಂದು ಪ್ರಶ್ನಿಸಿದ್ದಾರೆ. ನೈಟ್ ಕರ್ಫ್ಯೂ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಬೇಕಿತ್ತು. ನೈಟ್ ಕರ್ಫ್ಯೂ ವೇಳೆ 100ಕ್ಕೆ 80 ಜನ ಮನೆಯಲ್ಲಿರುತ್ತಾರೆ.  ಇಂತಹ ಸಮಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿ ಏನು ಪ್ರಯೋಜನ..? ಹುಡುಗಾಟಿಕೆಗೆ ಕೆಲಸ ಮಾಡಬೇಡಿ.  ಕೊರೋನಾ ನಿಯಂತ್ರಣಕ್ಕೆ ಸರಿಯಾದ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.no-night-curfew-former-cm-hd-kumaraswamy-outrage-against-government

ಇನ್ನು ಒಂದು ತಿಂಗಳು ಶಾಲೆ ಆರಂಭ ಮುಂದೂಡಿದರೇ ಏನು ಆಗಲ್ಲ…

ಜನವರಿ 1ರಿಂದ ಶಾಲೆ ಆರಂಭ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇನ್ನು ಒಂದು ತಿಂಗಳು ಶಾಲೆ ಆರಂಭ ಮುಂದೂಡಿದರೇ ಏನು ಆಗಲ್ಲ. ಶಾಲೆ ಆರಂಭಕ್ಕೆ ಏನು ಸಿದ್ಧತೆ ಮಾಡಿಕೊಂಡಿದ್ದೀರಿ..? ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕ. ಶಾಲೆ ಆರಂಭದ ಬಗ್ಗೆ ಮರು ಚಿಂತನೆ ಮಾಡಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

Key words: no- night curfew-former CM- HD Kumaraswamy- outrage–against- government