ದರ್ಶನ್ ‘ರಾಬರ್ಟ್’ ಸೆಟ್’ನಲ್ಲಿ ಮೊಬೈಲ್ ಬಳಕೆ ನಿಷಿದ್ಧ

ಬೆಂಗಳೂರು, ಮೇ 07, 2019 (www.justkannada.in): ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ.

ಈ ಸಿನಿಮಾವನ್ನು ‘ಚೌಕ’ ಸಿನಿಮಾ ಖ್ಯಾತಿಯ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

ಸಿನಿಮಾ ಸೆಟ್‍ನಲ್ಲಿ ಮೊಬೈಲ್ ಬಳಸಬಾರದು ಎಂಬ ಷರತ್ತು ಹಾಕಿದ್ದಾರೆ. ಚಿತ್ರೀಕರಣದಿಂದ ಸುಮಾರು 50 ಮೀಟರ್ ನಷ್ಟು ದೂರದವರೆಗೂ ಮೊಬೈಲ್ ಬಳಸಬಾರದು. ಈ ನಿಯಮವು ಕಲಾವಿದರು ಮತ್ತು ತಂತ್ರಜ್ಞರಿಗೆ ಇಬ್ಬರಿಗೂ ಅನ್ವಯಿಸುತ್ತದೆ ಎಂದು ನಿರ್ದೇಶಕರು ಕಟ್ಟುನಿಟ್ಟಿನ ಆದೇಶವನ್ನು ಜಾರಿ ಮಾಡಿದ್ದಾರೆ.