ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿಲ್ಲ: ಎಲ್ಲರಿಗೂ ಉತ್ತಮ ಸ್ಥಾನ ನೀಡುವ ವಿಶ್ವಾಸವಿದೆ- ಮೈಸೂರಿನಲ್ಲಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿಕೆ..

ಮೈಸೂರು,ಡಿ,12,2019(www.justkannada.in): ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿಲ್ಲ. ಆದರೆ ಸಿಎಂ ಬಿಎಸ್ ವೈ ಎಲ್ಲರಿಗೂ ಉತ್ತಮ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದರು.

ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್, ಹುಣ್ಣಿಮೆ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ 15ಕ್ಷೇತ್ರಗಳಲ್ಲಿ ಉಪಚುನಾವಣೆ ಮಕ್ತಾಯವಾಗಿದೆ. ಅನರ್ಹರಿಗೆ ಲೈನ್ ಕ್ಲಿಯರ್ ಆಗಿದ್ದು, 12 ಕ್ಷೇತ್ರಗಳಲ್ಲಿ ಅನರ್ಹರು ಗೆದ್ದಿದ್ದಾರೆ. ನಮ್ಮ ಮೇಲಿನ ಕಳಂಕದಿಂದ ಹೊರಬಂದಿದ್ದೇವೆ. ನನ್ನ ಕ್ಷೇತ್ರ ಹಾಗೂ ರಾಜರಾಜೇಶ್ವರಿ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ನಮ್ಮ ಕೇತ್ರದ ಆತಂಕ ಕೂಡಾ ನಿವಾರಣೆಯಾಗಿದೆ. ಶೀಘ್ರದಲ್ಲೇ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸಂಪುಟ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಗೌಡ ಪಾಟೀಲ್,  ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿಲ್ಲ, ಎಲ್ಲರಿಗೂ ಉತ್ತಮ ಸ್ಥಾನ ನೀಡುವ ವಿಶ್ವಾಸವಿದೆ. ಸರ್ಕಾರ ರಚನೆಯಲ್ಲಿ 17ಶಾಸಕರೂ ಪ್ರಮುಖ ಪಾತ್ರವಹಿಸಿದ್ದಾರೆ. ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡುತ್ತಾರೆ. ಈ ಬಗ್ಗೆ ನಾವು 17 ಜನರು ನಿನ್ನೆ ಸಭೆ ಸೇರಬೇಕಿತ್ತು. ಕೆಲವರು ಬರಲಾಗಲಿಲ್ಲ ಆದ್ದರಿಂದ ಉಳಿದವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೀವಿ. ಗೆದ್ದವರಿಗೆಲ್ಲಾ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಸಂಪುಟ ವಿಸ್ತರರಣೆಯಾಗುತ್ತದೆ. ಸಂಪುಟ ವಿಸ್ತರಣೆಯಲ್ಲಿ ಬಿಎಸ್ವೈಗೆ ಯಾವುದೇ ಸವಾಲುಗಳಿಲ್ಲ‌. ಸಂಪುಟ ವಿಸ್ತರಣೆ ಅನುಮತಿ ಪಡೆಯಲು ಸಿಎಂ ದೆಹಲಿಗೆ ತೆರಳುತ್ತಾರೆ. ಅನುಮತಿ ಪಡೆದು ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ತಿಳಿಸಿದರು.

ಸದ್ಯಕ್ಕೆ ಬಿಜೆಪಿಯಲ್ಲಿ ವಲಸೆ, ಮೂಲ ಅನ್ನೊ ಮಾತು ಬಂದಿಲ್ಲ. ಸರ್ಕಾರ ರಚಿಸೋದಿಕ್ಕೆ 17ಜನರೂ ಪ್ರಮುಖ ಪಾತ್ರ ವಹಿಸಿದ್ದಾರೆಂದು ಅವರಿಗೂ ಗೊತ್ತಿದೆ ಎಂದು ಪ್ರತಾಪ್ ಗೌಡ ಪಾಟೀಲ್ ತಿಳಿಸಿದರು.

ಉಪಚುನಾವಣೆ ಸಿದ್ಧತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ಈಗಾಗಲೇ 2ತಿಂಗಳಿಂದ ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರ ಜೊತೆ ಒಡನಾಟ ಇದೆ. ಒಕ್ಕೊರಲಿನಿಂದ ಎಲ್ಲರೂ ಸಹಕಾರ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

Key words: No expected –ministrial post- disqualified MLA-Pratap Gowda Patil-Mysore