ಆಷಾಢ ಮಾಸ: ಮೈಸೂರು ಜಿಲ್ಲೆಯಾದ್ಯಾಂತ ಪ್ರಸಾದ ವಿತರಣೆಗೆ ಅವಕಾಶ ಇಲ್ಲ- ಮೈಸೂರು ಡಿಸಿ ಅಭಿರಾಂ ಜೀ ಶಂಕರ್ ಆದೇಶ…

kannada t-shirts

ಮೈಸೂರು,ಜೂ,19,2020(www.justkannada.in):  ಆಷಾಢ ಮಾಸದ ಹೆಸರಲ್ಲಿ ಮೈಸೂರು ಜಿಲ್ಲೆಯಾಧ್ಯಂತ ಪ್ರಸಾದ ವಿತರಣೆಗೆ ಅವಕಾಶ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ‌.ಶಂಕರ್ ಆದೇಶ ಹೊರಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಮಂಗಳವಾರವು ಚಾಮುಂಡಿಬೆಟ್ಟ ಮುಚ್ಚಬೇಕು ಎಂಬ ಅಭಿಪ್ರಾಯ ಇದೆ. ಮಂಗಳವಾರದ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲಾಗುವುದು. ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನ ಹತ್ತುವವರ ಸಂಖ್ಯೆ ನೋಡಿ ನಿರ್ಬಂಧದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಆಷಾಢದಲ್ಲಿ ಇಡೀ ತಿಂಗಳು ದೇವಾಲಯ ಮುಚ್ಚುವುದರ ಬಗ್ಗೆ ಪರಿಸ್ಥಿತಿ ನೋಡಿ ನಿರ್ಧರಿಸಲಾಗುತ್ತದೆ. ನಗರದಲ್ಲಿರುವ ದೇವಾಲಯಗಳಲ್ಲಿ ಹೆಚ್ವು ಜನ ಸೇರಿದ್ರೆ ಅವುಗಳಿಗೂ ನಿರ್ಬಂಧ ವಿಧಿಸಲಾಗುದು ಎಂದು ತಿಳಿಸಿದರು.

ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿ ಅಭಿರಾಂ ಜೀ ಶಂಕರ್, ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಪಂಚಾಯತಿಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನ ನೇಮಕ ಮಾಡಬೇಕು. ಇದಕ್ಕಾಗಿ ಅಧಿಕಾರಿಗಳ ಪಟ್ಟಿ ತಯಾರಿಸುತ್ತಿದ್ದೇವೆ. ಹಲವು ಅಧಿಕಾರಿಗಳನ್ನ ಕೋವಿಡ್ ಕೆಲಸಕ್ಕೆ ನಿಯೋಜನೆ ಮಾಡಿದ್ದೇವೆ. ಮುಂದೆ ಕೂಡ ಪ್ರವಾಹ ಬರುವ ಸಾಧ್ಯತೆ ಇದೆ. ಆ ಕೆಲಸಕ್ಕೆ ನೀರಾವರಿ ಇಲಾಖೆ ಅಧಿಕಾರಗಳನ್ನ ನಿಯೋಜನೆ ಮಾಡಬೇಕಿದೆ ಎಂದು ಹೇಳಿದರು.no-distribution-prasada-temple-mysore-district-ashada-masa-dc-abhiram-jee-shankar

ಮೈಸೂರು ಜಿಲ್ಲೆಯಲ್ಲಿ ಒಟ್ಟು 254 ಗ್ರಾಮ ಪಂಚಾಯ್ತಿಗಳಿವೆ. ಅದರಲ್ಲಿ ಎಷ್ಟು ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂಬ ಮಾಹಿತಿ ಕಲೆಹಾಕುತ್ತಿದ್ದೇವೆ. ಶೀಘ್ರದಲ್ಲೇ ಆಡಳಿತಾಧಿಕಾರಿಗಳನ್ನ ನೇಮಕ ಮಾಡಲಾಗುವುದು ಎಂದು ಅಭಿರಾಂ ಜೀ ಶಂಕರ್ ತಿಳಿಸಿದರು.

Key words: no distribution – prasada- temple- Mysore district –ashada masa-DC -Abhiram Jee Shankar

website developers in mysore