ಈ ಬಾರಿಯೂ ಹಾಸನಾಂಬೆ ನೇರ‌ ದರ್ಶನ ಇಲ್ಲ..

ಹಾಸನ,ಅಕ್ಟೋಬರ್,7,2021(www.justkannada.in): ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ, ಅ.28 ರಿಂದ ಆರಂಭವಾಗಲಿದ್ದು ಈ ಬಾರಿಯೂ ಹಾಸನಾಂಬೆ ನೇರ‌ ದರ್ಶನಕ್ಕೆ ಅವಕಾಶ ಇಲ್ಲ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅ.28 ರಿಂದ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಅಂದು ಮಧ್ಯಾಹ್ನ 12 ಕ್ಕೆ‌ ಗರ್ಭಗುಡಿ ಬಾಗಿಲು ತೆರೆಯಲಿದೆ , ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರನ್ನು ಆಹ್ವಾನಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಈ ಬಾರಿ 10 ದಿನ ಜಾತ್ರಾ ಮಹೋತ್ಸವ ನಡೆಯಲಿದ್ದು,  ನವೆಂಬರ್ 6 ರ ಮಧ್ಯಾಹ್ನ ಬಾಗಿಲು ಮುಚ್ಚಲಿದೆ, ಕೊರೊನಾ ಮೂರನೇ ಅಲೆ‌ ಹಿನ್ನೆಲೆ, ಈ ಬಾರಿಯೂ ಸಾರ್ವಜನಿಕ ದರ್ಶನಕ್ಕೆ ನಿಷೇಧ ವಿಧಿಸಲಾಗಿದೆ, ಕಳೆದ ವರ್ಷದಂತೆ ಆನ್ ಲೈನ್, ಎಲ್ ಇ ಡಿ ಪರದೆ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ವಿದ್ಯುದಲಂಕಾರ ಮುಂದುವರೆಯಲಿದೆ.

Key words:  no direct –Hassanambe-darshan- start-october 8