Promotion
ನವದೆಹಲಿ,ಆಗಸ್ಟ್,28,2020(www.justkannada.in): ಅಂತಿಮ ಪದವಿ ಪರೀಕ್ಷೆ ಮುಂದೂಡುವಂತಿಲ್ಲ. ಪರೀಕ್ಷೆ ನಡೆಸಲೇ ಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಕೊರೋನಾ ಹಿನ್ನೆಲೆ ಪದವಿ ಪರೀಕ್ಷೆಗಳನ್ನ ಮುಂದೂಡುವಂತೆ ಕೋರಿ ಸಲ್ಲಿಸಿದ್ಧ ಅರ್ಜಿಯನ್ನ ವಜಾಗೊಳಿಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಪರೀಕ್ಷೆ ನಡೆಸಲೇ ಬೇಕು. ಪರೀಕ್ಷೆ ನಡೆಸದೆ ಪಾಸ್ ಮಾಡುವಂತಿಲ್ಲ ಎಂದು ಆದೇಶಿಸಿದೆ.
ಪದವಿ ಪರೀಕ್ಷೆ ಮುಂದೂಡಿಕೆ ಇಲ್ಲ. ಪರೀಕ್ಷೆ ದಿನಾಂಕ ನಿಗದಿ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು, ಸೆಪ್ಟಂಬರ್ 30 ರೊಳಗೆ ಪರೀಕ್ಷೆ ನಡೆಸುವುದು ಕಡ್ಡಾಯವಲ್ಲ. ಆದರೆ ಪರೀಕ್ಷೆ ಮುಂದೂಡುವಂತಿಲ್ಲ. ಎಂದು ಹೇಳಿ ಸುಪ್ರೀಂಕೋರ್ಟ್ ಯುಜಿಸಿ ಆದೇಶ ಎತ್ತಿ ಹಿಡಿದಿದೆ.
Key words: No -Degree –Examination- postponed-Supreme Court – order.