​ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್.

kannada t-shirts

ನವದೆಹಲಿ,ಫೆಬ್ರವರಿ,1,2022(www.justkannada.in): ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಲೋಕಸಭೆಯಲ್ಲಿ ಇಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಸುಮಾರು 1 ಗಂಟೆ 33 ನಿಮಿಷಗಳ ಕೇಂದ್ರ ಬಜೆಟ್ ಮಂಡಿಸಿದರು. ಈ ವೇಳೆ ಈ ವಿಚಾರವನ್ನ ಘೋಷಿಸಿದರು.  ಈ ಬಜೆಟ್ ನಲ್ಲಿ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ತೆರಿಗೆಯನ್ನು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ.

ನೂತನ ತೆರಿಗೆ ನೀತಿಯನ್ನು ಪರಿಚಯಿಸಲಾಗುತ್ತಿದೆ.  ತೆರಿಗೆ ಪಾವತಿಯಲ್ಲಿನ ತಪ್ಪು ಸರಿ ಪಡಿಸೋದಕ್ಕಾಗಿ 2 ವರ್ಷ ಕಾಲಾವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ಈ ನಡುವೆ ಸಹಕಾರಿ ಸಂಘಗಳ ಸರ್ಚ್ ಚಾರ್ಜ್ ಅನ್ನು ಶೇ.12 ರಿಂದ 7ಕ್ಕೆ ಇಳಿಕೆ ಮಾಡಿರೋದಾಗಿ ಘೋಷಣೆ ಮಾಡಿದರು.

ಕೇಂದ್ರ-ರಾಜ್ಯ ಸರ್ಕಾರದ ನೌಕರರಿಗೆ ಏಕ ರೂಪದ ತೆರಿಗೆ. ಆದಾಯ ವಂಚನೆ ಕೋರರಿಗೆ ಶಾಕ್​- ತೆರಿಗೆ ವಂಚನೆ ಪತ್ತೆಯಾದ್ರೆ ಯಾವುದೇ ಸೌಲಭ್ಯ ಸಿಗಲ್ಲ. ವಂಚಕ ಕಂಪನಿಗಳು ಬ್ಲ್ಯಾಕ್​ ಲಿಸ್ಟ್​ಗೆ. ಸ್ಟಾರ್ಟ್​ಅಪ್​ಗಳಿಗೆ ಉತ್ತೇಜನ ನೀಡಲು ಮುಂದಿನ ವರ್ಷದವರೆಗೂ ಸ್ಟಾರ್ಟ್​ಅಪ್​ಗಳಿಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ತಿಳಿಸಿದರು.

Key words: No changes-income tax –system-Nirmala Sitharaman.

ENGLISH SUMMARY….

No change in Income Tax
New Delhi, February 1, 2022 (www.justkannada.in): The Income Tax slabs have not been changed in this budget. Finance Minister Nirmala Seetharaman announced that there will be no changes in the income tax slabs.
The Finance Minister presented 1 hour, 33 minutes duration Union Budget today. “We are introducing a new tax policy. Accordingly, a duration of 2 years will be given to set right the mistakes in payment of income tax,” she said. The surcharge on cooperative societies has been reduced to 7% from 12%.
Uniform tax on Central and State Government employees; shock for IT violators – No facilities for those who violate tax policy; companies that bypass tax will be black listed; tax rebate on startups to continue till next year are a few other highlights of the 2022-23 budget.
Keywords: Union Budget/ Finance Ministry/ Income Tax/ no change

website developers in mysore