ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ಹೊಸ ಡೆತ್ ವಾರೆಂಟ್ ಜಾರಿ:  ನಾಲ್ವರು ಅಪರಾಧಿಗಳಿಗೆ ಫೆ.1 ರಂದು ಗಲ್ಲು…

Promotion

ನವದೆಹಲಿ,ಜ,17,2020(www.justkannada.in): ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು  ಅಪರಾಧಿಗಳಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಹೊಸ ಡೆತ್ ವಾರೆಂಟ್ ಹೊರಡಿಸಿದೆ.

ನಾಲ್ವರು ಅಪರಾಧಿಗಳಿಗೆ ಗಲ್ಲಿಗೇರಿಸಲು ಹೊಸ ದಿನಾಂಕ ನಿಗದಿ ಮಾಡಿದ್ದು  ಫೆಬ್ರವರಿ 1ರ ಬೆಳಿಗ್ಗೆ 6 ಗಂಟೆಗೆ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ಕೋರ್ಟ್ ಆದೇಶಿಸಿದೆ. ಈ ಹಿಂದೆ ಜನವರಿ 22 ರಂದು ಗಲ್ಲು ಶಿಕ್ಷೆ ವಿಧಿಸಲು ಆದೇಶಿಸಿತ್ತು.

ಆದರೆ  ಅಪರಾಧಿ ಮುಖೇಶ್ ಕ್ಷಮದಾನ ಕೋರಿ  ಅರ್ಜಿಯನ್ನ ಸಲ್ಲಿಸಿದ್ದನು. ಈ ಅರ್ಜಿಯನ್ನ ರಾಷ್ಟ್ರಪತಿಗಳು ಇಂದು ತಿರಸ್ಕರಿಸಿದ್ದು ಈ ಹಿನ್ನೆಲೆ ನಾಲ್ವರು ಅಪರಾಧಿಗಳಾದ ಮುಕೇಶ್ , ವಿನಯ್ , ಅಕ್ಷಯ್ , ಪವನ್ ಗೆ ಫೆಬ್ರವರಿ 1 ರಂದು  ಗಲ್ಲಿಗೇರಿಸಲು ಕೋರ್ಟ್ ಡೆತ್ ವಾರೆಂಟ್ ಹೊರಡಿಸಿದೆ.

Key words: Nirbhaya gang rape- murder case-Death Warrant –Feb1-death-sentenced