ನೈಟ್ ಕರ್ಪ್ಯೂ ಜಾರಿ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ : ಹೋಟೆಲ್ ಮಾಲೀಕರ  ಸಂಘದ ಅಧ್ಯಕ್ಷ ನಾರಾಯಣ್ ಗೌಡ ಬೇಸರ

ಮೈಸೂರು,ಡಿಸೆಂಬರ್,23,2020(www.justkannada.in) :  ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಯು ಪ್ರವಾಸೋದ್ಯಮಕ್ಕೆ  ಇದು ದೊಡ್ಡ ಹೊಡೆತವಾಗಿದೆ. ಪ್ರವಾಸೋದ್ಯಮ ನಂಬಿ ಬದುಕುವ ಹೋಟೆಲ್ ಉದ್ಯಮಿಗಳಿಗೆ ತೊಂದರೆ ಯಾಗಲಿದೆ ಎಂದು ಹೋಟೆಲ್ ಮಾಲೀಕರ  ಸಂಘದ ಅಧ್ಯಕ್ಷ ನಾರಾಯಣ್ ಗೌಡ ಬೇಸರವ್ಯಕ್ತಪಡಿಸಿದ್ದಾರೆ.Teachers,solve,problems,Government,bound,Minister,R.Ashokಲಾಕ್ ಡೌನ್ ನಂತರ ಇತ್ತೀಚಗೆ ಶೇ.40ರಷ್ಟು ಉದ್ಯಮ ಚೇತರಿಕೆ ಕಂಡಿತ್ತು. ಆದರೆ, ಈಗ ರಾತ್ರಿ ಕರ್ಪ್ಯೂನಿಂದ ಮತ್ತಷ್ಟು ಹೊಡೆತ ಬೀಳಲಿದೆ. ಸರ್ಕಾರ ಇದರ ಬದಲು ಬೇರೆ ಕ್ರಮಗಳನ್ನು ಕೈಗೊಳ್ಳಬಹುದಿತ್ತು ಎಂದು ಹೇಳಿದ್ದಾರೆ.

 

Night,Curfew,Enforcement,tourism,Big shot,Narayan Gowda,president,Hotel,Owners,Association
ಕೃಪೆ : internet

ಸರ್ಕಾರ  ಮಾರ್ಗಸೂಚಿಯಂತೆ ನೂತನ ವರ್ಷಾಚರಣೆಗೆ ಯಾವುದೇ ಸ್ಷೆಷಲ್ ಈವೆಂಟ್ ಕೈಗೊಂಡಿರಲಿಲ್ಲ. ಕ್ರಿಸ್ ಮಸ್ ಆಚರಣೆಗೂ ತೊಂದರೆಯಾಗಲಿದೆ.  ನೈಟ್ ಕರ್ಪ್ಯೂ ತೆರವು ಮಾಡುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೋಟೆಲ್ ಮಾಲೀಕರ  ಸಂಘದ ಅಧ್ಯಕ್ಷ ನಾರಾಯಣ್ ಗೌಡ ತಿಳಿಸಿದ್ದಾರೆ.

key words : Night-Curfew-Enforcement-tourism-Big shot-Narayan Gowda-president-Hotel-Owners-Association