ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ: ಅಮಿತ್ ಶಾ ಹೇಳಿಕೆ ಬಗ್ಗೆ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದು ಹೀಗೆ…?

kannada t-shirts

ಮೈಸೂರು,ಸೆಪ್ಟಂಬರ್,7,2021(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ  ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಸಚಿವ ಡಾ.ಅಶ್ವಥ್ ನಾರಾಯಣ್, ಯಾವುದೇ ಪಕ್ಷದಲ್ಲಿ ನಾಯಕರಿದ್ದಾಗ ಅವರ ಮುಂದಾಳತ್ವದಲ್ಲಿ ಎಲ್ಲಾ ನಡೆದುಕೊಂಡು ಹೋಗ್ತಿರುತ್ತೆ. ಈಗ ಸಿಎಂ ಬೊಮ್ಮಾಯಿ ಇದ್ದಾರೆ, ಅಧ್ಯಕ್ಷರು ಕಟೀಲ್ ಇದ್ದಾರೆ. ಅವರ ಮುಂದಾಳತ್ವದಲ್ಲಿ ಪಕ್ಷ ನಡೆಯುತ್ತಿದೆ. ಮುಂದಿನ ಚುನಾವಣೆ ಯಾರ ನಾಯಕತ್ವದಲ್ಲಿ ನಡಿಯಬೇಕು ಅನ್ನೊದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ.ಅದರ ಚರ್ಚೆ ಈಗ ಬೇಡ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ  ಹೇಳಿದರು.

ಆಫ್ಘನ್ ವಿದ್ಯಾರ್ಥಿಗಳ ವೀಸಾ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ್, ಅದನ್ನ ವಿದೇಶಾಂಗ ಸಚಿವರು ನೋಡಿಕೊಳ್ತಾರೆ. ಅವಧಿ ಮುಗಿದವರು ಅರ್ಜಿ ಹಾಕಿಕೊಳ್ಳಲಿ. ಅದನ್ನ ವಿದೇಶಾಂಗ ಇಲಾಖೆಯವರು ಅವರು ಪರಿಶೀಲನೆ ಮಾಡ್ತಾರೆ. ನಾವು ಯಾರಿಗೂ ತಿಂಗಳ ಅವಧಿಗೆ ವೀಸಾ ಕೊಡೊದಿಲ್ಲ. ಶೈಕ್ಷಣಿಕ ಅವಧಿಗೆ ಅಂತ ವೀಸಾ ಪಡೆದುಕೊಂಡಿರ್ತಾರೆ.ಇದರಲ್ಲಿ ನಾವು ತಲೆತೂರಿಸುವ ಪ್ರಮೇಯ ಇಲ್ಲ ಎಂದು ತಿಳಿಸಿದರು.

ನಿಗದಿಯಂತೆ ಪ್ರಸಕ್ತ ಸಾಲಿನಿಂದಲೇ ಜಾರಿ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ನಿಗದಿಯಂತೆ ಪ್ರಸಕ್ತ ಸಾಲಿನಿಂದಲೇ ಜಾರಿ ಮಾಡಲಾಗುತ್ತದೆ. ಈ ನೀತಿ ಸಂಪೂರ್ಣ ಅನುಷ್ಠಾನಕ್ಕೆ 15 ವರ್ಷ ಕಾಲಾವಕಾಶ ಇದೆ. ಈಗಾಗಲೇ ಏಳೆಂಟು ವರ್ಷದಿಂದಲೇ ಚರ್ಚೆಯಲ್ಲಿರೋದ್ರಿಂದ ಅಭಿಪ್ರಾಯ ಸಂಗ್ರಹ ಅಗತ್ಯವಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಠಿ ಮಾಡ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹಿಂದುಳಿದ ವರ್ಗ ಸೇರಿ ಎಲ್ಲರ ಅಭಿವೃದ್ಧಿ ಸಾಧ್ಯ ಇದೆ. ಕಾಂಗ್ರೆಸ್ ಗೆ ಯಾವುದೇ ಅಭಿವೃದ್ಧಿ ಬೇಕಾಗಿಲ್ಲ. ಹೀಗಾಗಿಯೇ ಅವರು ಅನಗತ್ಯ ಹೊಂದಲ ಸೃಷ್ಠಿ ಮಾಡಿ ವಿರೋಧ ಮಾಡ್ತಿದ್ದಾರೆ ಎಂದು ಹೇಳಿದರು.

ENGLISH SUMMARY….

Next elections in the State will be held under the leadership of CM Bommai: Minister Ashwathnarayan’s repsonse to Amit Shah’s statement
Mysuru, September 7,2021 (www.justkannada.in): “When there are leaders in any party everything will run under their leadership,” opined Higher Education Minister Dr. C.N. Ashwathnarayan.
In his response to BJP leader and Union Home Minister Amit Shah’s statement that the next elections in the state would be held under the leadership of Basavaraj Bommai, Minister Ashwathanarayan said, “today Bommai is our Chief Minister and Nalin Kumar Kateel is the President of the Party. The party will function under their guidance and leadership. The party High Command will decide under whose leadership should the next elections be held. Let us discuss it now.”
In his response to the question of extending the Visa of Afghan students, he informed that the External Affairs Minister would decide about it. “If the visa period has expired let them apply. The Department of External Affairs will examine. However, we won’t provide visas for just one month’s duration. They have availed visas for educational purposes. I don’t think we should interfere in this matter,” he said.
In his response about the implementation of the National Education Policy, the Higher Education Minister replied that it would be implemented from the present year itself as decided. “There are 15 years for its complete implementation. As this issue is already under discussion for the last 7-8 years, there is no need to collect opinions. The Congress party is unnecessarily creating confusion in this matter. The NEP allows the development of all, including the backward castes. But the Congress leaders don’t want overall development. That is why they are creating confusion and opposing it,” he added.
Keywords: Higher Education Minister/ Dr. C.N. Ashwathnarayan/ next election/ Basavaraj Bommai/ leadership

Key words: next election –CM basavaraj Bommai- Amit Shah- Minister -Ashwath Narayan

 

website developers in mysore