ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮೈಸೂರು ಮಿತ್ರ ಮುಖ್ಯ ವರದಿಗಾರ ಎಸ್.ಟಿ.ರವಿಕುಮಾರ್ ಆಯ್ಕೆ

ಮೈಸೂರು,ನವೆಂಬರ್,08,2020(www.justkannada.in) :ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಮುಖ್ಯ ವರದಿಗಾರ ಎಸ್.ಟಿ.ರವಿಕುಮಾರ್ ಆಯ್ಕೆಯಾಗಿದ್ದಾರೆ.

kannada-journalist-media-fourth-estate-under-lossರವಿಕುಮಾರ್ 220 ಮತ ಪಡೆದರೆ, ಅವರ ಪ್ರತಿಸ್ಪರ್ಧಿ ಕಿರಣ್ ಕುಮಾರ್ 110 ಮತ ಪಡೆದಿದ್ದು, ರವಿಕುಮಾರ್ 110 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.
ನಗರ ಉಪಾಧ್ಯಕ್ಷರಾಗಿ ಎಂ.ಎಸ್.ಬಸವಣ್ಣ(ಅನುರಾಗ್ ಬಸವರಾಜ್) 99, ಗ್ರಾಮಾಂತರ ಉಪಾಧ್ಯಕ್ಷರಾಗಿ ಧರ್ಮಾಪುರ ನಾರಾಯಣ್ 92, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಸುಬ್ರಹ್ಮಣ್ಯ-236, ನಗರ ಕಾರ್ಯದರ್ಶಿಯಾಗಿ ಪಿ.ರಂಗಸ್ವಾಮಿ(ರಂಗಣ್ಣ)-122, ಗ್ರಾಮಾಂತರ ಕಾರ್ಯದರ್ಶಿಯಾಗಿ ಎಂ.ಮಹದೇವ-63, ಖಜಾಂಚಿಯಾಗಿ ನಾಗೇಶ್ ಪಾಣತ್ತಲೆ-118 ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದವರು
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಪಿ.ನಾಗರಾಜ(124), ಕಬಿನಿ ಬೀರೇಶ್(119), ರಂಗಸ್ವಾಮಿ(107), ಕೃಷ್ಣೋಜಿರಾವ್(107), ಆರ್.ಕೃಷ್ಣ(104), ಶಿವಮೂರ್ತಿ ಜುಪ್ತಿಮಠ(99), ಮಾಚಮ್ಮ ಮಲ್ಲಿಗೆ(89), ಸುರೇಶ್ (89), ಧನಂಜಯ(75), ರಘು(68) ಆಯ್ಕೆಯಾಗಿದ್ದಾರೆ.

ಅವಿರೋಧ ಆಯ್ಕೆಯಾದವರು
ಇದಕ್ಕೂ ಮುನ್ನ ಕೆ.ಆರ್.ನಗರ ತಾಲೂಕಿನಿಂದ ರಾಮಕೃಷ್ಣೇಗೌಡ, ಹುಣಸೂರು ತಾಲೂಕಿನಿಂದ ದಾ.ರಾ.ಮಹೇಶ್, ತಿ.ನರಸೀಪುರ ತಾಲೂಕಿನಿಂದ ಎಂ.ನಾರಾಯಣ್, ಎಚ್.ಡಿ.ಕೋಟೆ ತಾಲೂಕಿನಿಂದ ಎಂ.ಎಲ್.ರವಿಕುಮಾರ್, ನಂಜನಗೂಡು ತಾಲೂಕಿನಿಂದ ಹುಲ್ಲಹಳ್ಳಿ ಶ್ರೀನಿವಾಸ್ ಅವರು ಗ್ರಾಮಾಂತರ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 343 ಮಂದಿ ಸದಸ್ಯರಲ್ಲಿ ನಗರದ 214 ಮಂದಿ ಹಾಗೂ ಗ್ರಾಮಾಂತರದ 127 ಮಂದಿ ಮತ ಚಲಾಯಿಸಿದರು.  ಚುನಾವಣಾಧಿಕಾರಿಯಾಗಿ ಎಂ.ಎಸ್.ಕಾಶೀನಾಥ್, ಸಹಾಯಕ ಚುನಾವಣಾಧಿಕಾರಿಯಾಗಿ ಬನ್ನೂರು ಕೆ.ರಾಜು ಕಾರ್ಯನಿರ್ವಹಿಸಿದರು.

new,president,District,Journalists,Association,S.T.Ravikumar,elected,chief,correspondent,Mysore mithra

key words : new-president-District-Journalists-Association-S.T. Ravikumar-elected-chief-correspondent-Mysore mithra