ಮೈಸೂರು ಹೊರವಲಯದಲ್ಲಿ ರೈಲಿಗೆ ತಲೆ ಕೊಟ್ಟು ನವ ವಿವಾಹಿತೆ ಆತ್ಮಹತ್ಯೆ

Promotion

ಬೆಂಗಳೂರು, ಜನವರಿ 02, 2021 (www.justkannada.in): ರೈಲಿಗೆ ತಲೆ ಕೊಟ್ಟು ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೊರವಲಯದಲ್ಲಿ ನಡೆದಿದೆ.

ಹಾಲು ತರುವುದಾಗಿ ಹೇಳಿ ಮನೆಯಿಂದ ಹೋದ ನವ ವಿವಾಹಿತೆ. ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶ್ರೀರಂಗಪಟ್ಟಣದ ಸ್ವಾತಿ(19) ಮೃತ ದುರ್ದೈವಿ. ಹತ್ತು ತಿಂಗಳ ಹಿಂದೆ ಮೈಸೂರಿನ ಕುಂಬಾರಕೊಪ್ಪಲಿನ ನಿವಾಸಿ ಸಾಗರ್ ಎಂಬಾತನನ್ನ ವಿವಾಹವಾಗಿದ್ದರು.

ನಿನ್ನೆ ಬೆಳಿಗ್ಗೆ ಹಾಲು ತರುವುದಾಗಿ ಕುಂಬಾರಕೊಪ್ಪಲಿನಿಂದ ಹೊರಟ ಸ್ವಾತಿ ಮನೆಗೆ ಹಿಂದಿರುಗಿಲ್ಲ. ಸಂಜೆ ವೇಳೆಗೆ ವಿಕ್ರಾಂತ್ ಕಾರ್ಖಾನೆ ಬಳಿ ಇರುವ ಪ್ರೀತಿ ಗ್ರಾನೈಟ್ ಬಳಿ ರೈಲ್ವೆ ಹಳಿ ಸಮೀಪ ತಲೆ ಚಿದ್ರವಾಗಿರುವ ಸ್ವಾತಿ ದೇಹ ಪತ್ತೆಯಾಗಿದೆ.

ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.