ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವು ಆರೋಪ: ಮೈಸೂರಿನ ಚಲುವಾಂಬ ಆಸ್ಪತ್ರೆ ಬಳಿ ಪೋಷಕರಿಂದ ಆಕ್ರೋಶ…

ಮೈಸೂರು,ಮೇ,9,2019(www.justkannada.in): ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ನಡೆದಿದೆ.

ವೈದ್ಯರ ನಿರ್ಲಕ್ಷ್ಯಕ್ಕೆ ಪ್ರಪಂಚ ನೋಡುವ ಮುಂಚೆಯೆ  ಮಗು ಕಣ್ಣು ಮುಚ್ಚಿದೆ. ನೆನ್ನೆ ಬೆಳಿಗ್ಗೆ ಹೆರಿಗೆಗಾಗಿ ಚಲುವಾಂಬ ಆಸ್ಪತ್ರೆಗೆ ಲಕ್ಷ್ಮೀ  ಎಂಬುವವರು ದಾಖಲಾಗಿದ್ದರು. ಮೂಲತಃ ಎನ್.ಆರ್. ಮೊಹಲ್ಲದ ಗಣೇಶ್ ನಗರದ ನಿವಾಸಿ ಹರಿಶ್ ಅವರು ಪತ್ನಿ ಲಕ್ಷ್ಮೀ ಅವರಿಗೆ ನಿನ್ನೆ ಬೆಳಿಗ್ಗೆ ಹೆರಿಗೆಯಾಗಿತ್ತು. ನೆನ್ನೆ ದಿನ ಪೂರ್ತಿ ಲಕ್ಷ್ಮಿ ಹಾಗೂ ಮಗುವಿನ ಆರೋಗ್ಯ ತಪಾಸಣೆ ಮಾಡಿ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು.

ಆದ್ರೇ ಇಂದು ಬೆಳೆಗ್ಗೆ ಏಕಾಏಕಿ ಮಗ ಸತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದು, ಆಸ್ಪತ್ರೆಯ ಸಿಬ್ಬಂದಿಯ ನಡೆಗೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಗುವಿನ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಚಲುವಾಂಬ ಆಸ್ಪತ್ರೆ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಚಲುವಾಂಬ ಆಸ್ಪತ್ರೆಗೆ ದಾಖಲಾಗುವ ಮಹಿಳೆಯರಿಗೆ ದೈಹಿಕ ಹಿಂಶೆ ನೀಡಲಾಗುತ್ತಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.

Key words: Newborn- infant- death -doctor’s- negligence- Outraged – parents – Chaluvamba hospital