ನಾಳೆಯಿಂದ ಮೈಸೂರಿನ ಐಶ್(AIISH) ನಲ್ಲಿ ನವಜಾತ ಶಿಶುವಿನ ಆರೈಕೆ ವಾರ.

kannada t-shirts

ಮೈಸೂರು,ನವೆಂಬರ್, 15,2021(www.justkannda.in): ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮೈಸೂರು ನವಜಾತ ಶಿಶುಗಳ ಆರೈಕೆ ವಾರವನ್ನು ನಾಳೆಯಿಂದ ಆಚರಿಸಲಿದೆ.

ಇದರ ಅಂಗವಾಗಿ ನವಜಾತ ಶಿಶುಗಳಿಗೆ ಉಚಿತವಾಗಿ ಶ್ರವಣ ಪರೀಕ್ಷೆಯನ್ನು ಮಾಡಲಾಗುತ್ತಿದ್ದು, ದಿನಾಂಕ 16 ರಿಂದ 21 ನವೆಂಬರ್ 2021 ರವರೆಗೆ ಶಿಶುವನ್ನು ಕರೆತಂದು ಶ್ರವಣ ಪರೀಕ್ಷೆ ಮಾಡಿಸುವ ಮೂಲಕ ಸೌಲಭ್ಯವನ್ನು ಪಡೆಯಬಹುದಾಗಿದೆ. ಮಗುವಿನಲ್ಲಿ ಶ್ರವಣದೋಷದ ಲಕ್ಷಣಗಳು ಕಂಡು ಬಂದರೆ, ಅಂತಹ ಮಕ್ಕಳಲ್ಲಿ ನ್ಯೂನ್ಯತೆಯನ್ನು ಪ್ರಾರಂಭಿಕ ಹಂತದಲ್ಲೇ ಹೇಗೆ ಗುರುತಿಸಬೇಕು ಮತ್ತು ಅದಕ್ಕೆ ಸೂಕ್ತಚಿಕಿತ್ಸೆಯ ಬಗ್ಗೆ ಈ ವೇಳೆ ಮಾಹಿತಿ ನೀಡಲಾಗುತ್ತದೆ.

ಮಗು ಸಾಮಾನ್ಯವಾಗಿ ಬೇರೆ ಮಕ್ಕಳಂತೆ ಮಾತನಾಡಲು, ಕಿವಿ ಚೆನ್ನಾಗಿ ಕೇಳುವುದು ತುಂಬಾ ಮುಖ್ಯ. ಕಿವುಡುತನವು ಕಣ್ಣಿಗೆ ಕಾಣದ ಅಂಗವೈಕಲ್ಯ. ನವಜಾತ ಶಿಶುವಿನಲ್ಲಿ ಕಿವುಡುತನ ಬರಬಹುದು. ಇದರಿಂದ ಮಗುವಿನ ಮಾತಿನ ಕಲಿಕೆಗೆ ಮತ್ತು ಜೀವನ ಶೈಲಿಗೆ ತೊಂದರೆ ಉಂಟಾಗುತ್ತದೆ. ಈ ಶ್ರವಣದೋಷವು ಹಲವಾರು ಕಾರಣಗಳಿಂದ ಬರಬಹುದು, ಸಂಶೋಧನೆ ಪ್ರಕಾರ ಶೇಕಡ 2% ನವಜಾತ  ಶಿಶುಗಳಲ್ಲಿ ಕಿವಿ ತೊಂದರೆ ಇರುತ್ತದೆ. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿರುವ ಶಿಶುಗಳಿಗೆ, ಒಂಭತ್ತು ತಿಂಗಳು ತುಂಬುವ ಮುನ್ನ ಹುಟ್ಟಿದ ಶಿಶುಗಳಿಗೆ ಶ್ರವಣದೋಷ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿಯೊಂದು ನವಜಾತ ಶಿಶುವಿನ ಶ್ರವಣ ಪರೀಕ್ಷೆ ಅಗತ್ಯವಾಗಿದೆ.

ತಂತ್ರಜ್ಞಾನದ ಪ್ರಗತಿಯೊಂದಿಗೆ ಶ್ರವಣದೋಷವನ್ನು ಮಗು ಹುಟ್ಟಿದದಿನದಿಂದಲೇ ಗುರುತಿಸಬಹುದು ಹಾಗೂ ಈ ಪರೀಕ್ಷೆಯನ್ನು ಕೇವಲ  2ರಿಂದ 3 ನಿಮಿಷದಲ್ಲೇ ಮಗು ನಿದ್ರೆ ಮಾಡುತ್ತಿರುವಾಗಲೂ ಮಾಡಬಹುದಾಗಿದೆ ಎಂದು ಪೋಷಕರಾಗಿ ತಿಳಿದಿರಬೇಕು. ಹಾಗಾಗಿ ಪ್ರತಿ ಮಗುವನ್ನು ಹತ್ತಿರದ ಶ್ರವಣ ತಜ್ಞರು(ಆಡಿಯೋಲಾಜಿಸ್ಟ್) ಮತ್ತು ವಾಕ್-ಭಾಷಾ ತಜ್ಞರ (ಸ್ಪೀಚ್ಲ್ಯಾಂಗ್ವೇಜ್ಪ್ಯಾಥೋಲಜಿಸ್ಟ್)ಬಳಿ ಪರೀಕ್ಷೆಮಾಡಿಸಬೇಕು. ತಪಾಸಣೆಯಲ್ಲಿ ನವಜಾತ ಶಿಶುವಿಗೆ ಶ್ರವಣದೋಷವಿದೆ ಎಂದು ತಿಳಿದು ಬಂದರೆ ಮೂರು ತಿಂಗಳಿನೊಳಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು. ಏಕೆಂದರೆ ಎಷ್ಟು ಬೇಗ ಮಗುವಿಗೆ ಚಿಕಿತ್ಸೆ ದೊರಕುತ್ತದೋ ಅಷ್ಟು ಬೇಗ ಮಗು ಇತರ ಮಕ್ಕಳಂತೆ ಮಾತನಾಡಲು ಪ್ರಾರಂಭಿಸುತ್ತದೆ ಎಂದು ಐಶ್(AIISH) ತಿಳಿಸಿದೆ.

Key words: Newborn -Care Week – AIISH -tomorrow.

website developers in mysore