ನ್ಯೂಜಿಲ್ಯಾಂಡ್ ವಿರುದ್ದ ಗೆದ್ದು ಬೀಗಿದ ಕೊಹ್ಲಿ ಪಡೆ: ಎರಡು ಪಂದ್ಯ ಬಾಕಿ ಇರುವಾಗಲೇ ಟಿ-20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ…

ಹ್ಯಾಮಿಲ್ಟನ್,ಜ,29,2020(www.justkannada.in):  ನ್ಯೂಜಿಲ್ಯಾಂಡ್ ವಿರುದ್ದ ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವಿನ ಮೂಲಕ ಎರಡು ಪಂದ್ಯ ಬಾಕಿ ಇರುವಾಗಲೇ ಟಿ-20 ಸರಣಿಯನ್ನ ವಶಪಡಿಸಿಕೊಂಡಿದೆ.

ಇಲ್ಲಿನ ಸೆಡ್ಡಾನ್ ಪಾರ್ಕ್ ನಲ್ಲಿ ನಡೆದ ಮೂರನೇ ಟಿ ಟ್ವೆಂಟಿ ಪಂದ್ಯ ಸೂಪರ್ ಓವರ್ ಕ್ಲೈಮಾಕ್ಸ್ ಗೆ ಸಾಕ್ಷಿಯಾಯಿತು. ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅರ್ಧಶತಕದ ನೆರವಿನಿಂದ 20 ಓವರ್ ಗೆ 179 ರನ್ ಕಲೆ ಹಾಕಿತು.

ಕೊಹ್ಲಿ ಪಡೆ ನೀಡಿದ 179 ರನ್ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್  20 ಓವರ್ ಗೆ 179 ರನ್ ಬಾರಿಸಿತು.  ನ್ಯೂಜಿಲ್ಯಾಂಡ್ ಪರ ಭರ್ಜರಿ 95 ರನ್ ಗಳಿಸಿದ ಕೇನ್ ವಿಲಿಯಮ್ಸನ್  ತಂಡವನ್ನು ಬಹುತೇಕ ಜಯದ ಹಾದಿಗೆ ತಂದಿದ್ದರು. ಆದರೆ ಅಂತಿಮ ಓವರ್ ನಲ್ಲಿ ಶಮಿ ಎರಡು ವಿಕೆಟ್ ಕೀಳುವ ಮೂಲಕ ಪಂದ್ಯ ಟೈ ಆಯಿತು.

ಇದಾದ ಬಳಿಕ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್ ನಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್  17 ಎರಡು ಬೌಂಡರಿ ಮತ್ತು ಒಂದು ಸಿಕ್ಸ್ ನೆರವಿನಿಂದ 17 ರನ್ ಗಳಿಸಿತು. ಬಳಿಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ 20 ರನ್ ಬಾರಿಸುವ ಮೂಲಕ ಗೆದ್ದು ಬೀಗಿತು. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ಮಾಡಿದ ಟಿಮ್ ಸೌಥಿ. ಮೊದಲೆರಡು ಬಾಲ್ ಗಳಿಗೆ ಮೂರು ರನ್. ಮೂರನೇ ಎಸೆತಕ್ಕೆ ಕೆಎಲ್ ರಾಹುಲ್  ಬೌಂಡರಿ ಬಾರಿಸಿದರು. ನಾಲ್ಕನೇ ಬಾಲ್ ನಲ್ಲಿ  ಒಂದು ರನ್ ಕಲೆ ಹಾಕಿದರು. ಬಳಿಕ 2 ಬಾಲ್ ಗೆ 10 ರನ್ ಬೇಕಿದ್ದ ವೇಳೆ ಹಿಟ್ ಮ್ಯಾನ್ ರೋಹಿತ್ ಶರ್ಮಾ  ಎರಡು ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾಗೆ ಜಯ ತಂದು ಕೊಟ್ಟರು. ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 3-0 ಮುನ್ನಡೆ ಸಾಧಿಸಿದೆ.

Key words: New Zealand- Team India -T-20 series-won