ಹೊಸ ವರ್ಷಾಚರಣೆಗೆ ಡಿಜೆಗೆ ಅವಕಾಶ ಇಲ್ಲ: ಸರ್ಕಾರದ ಮಾರ್ಗಸೂಚಿಯಂತೆ ನಿರ್ಬಂಧ – ಮೈಸೂರು ಪೊಲೀಸ್ ಆಯುಕ್ತ ರಮೇಶ್ ಭಾನೋತ್.

ಮೈಸೂರು,ಡಿಸೆಂಬರ್,26,2022(www.justkannada.in): ಹೊಸ ವರ್ಷ ಆಚರಣೆಯಲ್ಲಿ ಡಿಜೆಗೆ ಅವಕಾಶವಿರುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್,  ರಾತ್ರಿ ಒಂದು ಗಂಟೆಯ ವರೆಗೂ ಪಾರ್ಟಿ ಅವಧಿ ವಿಸ್ತರಿಸುವಂತೆ ಮನವಿ ಬಂದಿದೆ, ಅದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ರಾಜ್ಯ ಸರ್ಕಾರದಿಂದ ಮಾರ್ಗಸೂಚಿಯ ನಿರೀಕ್ಷೆಯಲ್ಲಿದ್ದೇವೆ. ಸರ್ಕಾರದ ಮಾರ್ಗಸೂಚಿಯ ಅನುಸಾರ ಇಲ್ಲಿ ನಿರ್ಬಂಧಗಳನ್ನು ಕೈಗೊಳ್ಳುತ್ತೇವೆ. ಬಹುತೇಕ ಒಂದೆರಡು ದಿನಗಳಲ್ಲಿ ಮಾರ್ಗಸೂಚಿ ಬರುವ ನಿರೀಕ್ಷೆ ಇದೆ ಎಂದರು.

ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ ರೌಡಿ ಶೀಟರ್ ಎಂಬ ಕೆಪಿಸಿಸಿ ವಕ್ತರ ಎಂ ಲಕ್ಷ್ಮಣ್ ಆರೋಪ ಕುರಿತು ಪ್ರತಿಕ್ರಿಯಿಸಿದ ರಮೇಶ್ ಬಾನೋತ್,  ಕಿರಣ್ ಗೌಡ  ಹೆಸರು ರೌಡಿಪಟ್ಟಿಯಲ್ಲಿಲ್ಲ. ಆತನ ಮೇಲೆ ಬೇರೆ ಒಂದೆರಡು ಕೇಸ್ ಗಳಿವೆ ಅಷ್ಟೇ.  ಮೈಸೂರಿನಲ್ಲಿ ರೌಡಿಗಳ ಗಡಿಪಾರಿಗೆ ಮುಂದಾಗಿದ್ದೇವೆ. ಈಗಾಗಲೇ ಇಬ್ಬರನ್ನ ಗಡಿಪಾರು ಮಾಡಿದ್ದೇವೆ. ಇನ್ನೂ ಐದು ಮಂದಿ ಗಡಿಪಾರಿಗೆ ಪರಿಶೀಲಿಸಿದ್ದೇವೆ ಎಂದರು.

Key words: New Year -celebrations- Govt guidelines – Mysore Police Commissioner -Ramesh Bhanot.