ಹಾಲಿನಲ್ಲಿ ಕಲಬೆರಕೆ ಪತ್ತೆ ಮಾಡುವ ನೂತನ ವಿಧಾನ.

 

ಬೆಂಗಳೂರು,ಅಕ್ಟೋಬರ್,28,2021(www.justkannada.in): ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್ ಸಿನಮೆಕ್ಯಾನಿಕಲ್‌ ಇಂಜಿನೀಯರಿಂಗ್‌ ವಿಭಾಗದ ವಿಜ್ಞಾನಿಗಳು ಹಾಲಿನಲ್ಲಿ ನೀರಿನ ಕಲಬೆರಕೆಯನ್ನು ಪತ್ತೆಮಾಡುವ ಹೊಸ ವಿಧಾನವೊಂದನ್ನು ರೂಪಿಸಿದ್ದಾರೆ.

ಹಾಲಿನ ಕಲಬೆರಕೆಯ ಹಾವಳಿ ಭಾರತದಂತಹ ದೇಶಗಳಲ್ಲಿ ಅತಿಹೆಚ್ಚು. ಭಾರತೀಯ ಆಹಾರ ಸುರಕ್ಷತೆ ಹಾಗೂ ಮಾನಕಗಳ ನಿಕಾಯವು ನಿಗದಿಪಡಿಸಿರುವ ಮಾನಕಗಳನ್ನು ಪಾಲಿಸದ ಹಾಲುಸರಬರಾಜುದಾರರೇ ಹೆಚ್ಚು. ಹಾಲಿನಲ್ಲಿ ಸಾಮಾನ್ಯವಾಗಿ ನೀರು, ಯೂರಿಯಾವನ್ನು ಕಲಬೆರಕೆ ಮಾಡಿ ಮಾರಲಾಗುತ್ತದೆ. ಇವು ಹಾಲನ್ನು ಇನ್ನಷ್ಟು ಬೆಳ್ಳಗೆ ಇರುವಂತೆಯೂ ನೊರೆಗಟ್ಟುವಂತೆಯೂ ಮಾಡುತ್ತವೆ. ಜೊತೆಗೆ ಈ ಹಾಲನ್ನುಸೇವಿಸಿದವರ ಹೃದಯ, ಲೀವರ್‌ ಹಾಗೂ ಮೂತ್ರಪಿಂಡಗಳಿಗೂ ಕಲಬೆರಕೆ ಹಾಲು ಅಪಾಯ ತರಬಹುದು.

ಹಾಲಿನಲ್ಲಿ ನೀರನ್ನು ಬೆರೆಸಿದೆಯೋ ಇಲ್ಲವೋ ಎನ್ನುವುದನ್ನು ಪತ್ತೆ ಮಾಡಲು ಸದ್ಯಕ್ಕೆ ಲ್ಯಾಕ್ಟೋಮೀಟರನ್ನು ಬಳಸಬೇಕು. ಅಥವಾ ಹಾಲನ್ನು ಹೆಪ್ಪುಗಟ್ಟಿಸಿ, ಅದು ಹೆಪ್ಪುಗಟ್ಟುವ ಉಷ್ಣತೆಯನ್ನು ಗಮನಿಸಬೇಕು. ಇದರಲ್ಲಿ ಕೆಲವು ತೊಂದರೆಗಳಿವೆ. ಹಾಲಿನಲ್ಲಿ ಶೇಕಡ ೩.೫ರಷ್ಟು ಹೆಚ್ಚುವರಿ ನೀರು ಬೆರೆಸಿದ್ದರಷ್ಟೆ ಈ ವಿಧಾನಗಳು ಕಲಬೆರಕೆಯನ್ನು ಪತ್ತೆ ಮಾಡಬಲ್ಲುವು. ಯೂರಿಯಾ ಕಲಬೆರಕೆಯ ಪತ್ತೆ ಇನ್ನೂ ಕಷ್ಟ. ಅದನ್ನು ಪತ್ತೆಮಾಡುವ ಜೈವಿಕಸೆನ್ಸಾರುಗಳಂತಹ ಸುಧಾರಿತ ವಿಧಾನಗಳುಇವೆಯಾದರೂ, ಆ ಉಪಕರಣಗಳು ದುಬಾರಿ ಹಾಗೂ ಬೇಗನೆ ಹಾಳಾಗಬಲ್ಲವು.

 ಈ ನಿಟ್ಟಿನಲ್ಲಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ ಸಿನಸುಶ್ಮಿತಾದಾಶ್‌ ಮತ್ತು ಅವರ ವಿದ್ಯಾರ್ಥಿ ವೀರಕೇಶ್ವರಕುಮಾರ್‌ ರೂಪಿಸಿರುವ ವಿಧಾನ ಬಹಳ ಸರಳವಾದದ್ದು. ಈ ಹೊಸವಿಧಾನದಲ್ಲಿ ವಿಜ್ಞಾನಿಗಳು ಚೆಲ್ಲಿದ ಹಾಲಿನಹನಿ ಹಾಲು ಒಣಗುವಾಗ, ಅರ್ಥಾತ್‌ ಆವಿಯಾದಾಗ, ಉಳಿಯುವ ಘನಪದಾರ್ಥಗಳ ಕರೆಯ ವಿನ್ಯಾಸವನ್ನು ಗಮನಿಸಿದ್ದಾರೆ. ನೀರು ಕಲಬೆರಕೆ ಮಾಡಿದ ಅಥವಾ ಅಪ್ಪಟಹಾಲು ಉಳಿಸುವ ವಿನ್ಯಾಸಗಳು ಯೂರಿಯಾ ಕಲಬೆರಕೆಮಾಡಿದ ಹಾಲಿಗಿಂತ ಬೇರೆಯಾಗಿದ್ದುವು. ಕಲಬೆರಕೆ ಇಲ್ಲದ ಅಪ್ಪಟಹಾಲು ಆವಿಯಾದಾಗ ಉಳಿದವಿನ್ಯಾಸದಲ್ಲಿ ನಿರ್ದಿಷ್ಟಗಾತ್ರವಿಲ್ಲದಗುಳ್ಳೆಗಳಂತಹ ರಚನೆಗಳು ಬೇಕಾಬಿಟ್ಟಿಹರ ಡಿಕೊಂಡಿದ್ದುವು. ನೀರುಬೆರೆಸಿ ದಹಾಲಿನಲ್ಲಿ ಈ ವಿನ್ಯಾಸ ಇರಲಿಲ್ಲ. ಬೆರೆಸಿದ ನೀರಿನ ಪ್ರಮಾಣಕ್ಕೆತಕ್ಕಂತೆ ವಿನ್ಯಾಸ ಬದಲಾಗಿತ್ತು. ಯೂರಿಯಾ ಬೆರೆಸಿದ ಹಾಲು ಉಳಿಸಿದ ವಿನ್ಯಾಸದಲ್ಲಿ ನಟ್ಟನಡುವೆ ಏನೂಇರಲೇಇಲ್ಲ. ಇದು ಆವಿಯಾಗದ ಪದಾರ್ಥವಾದ್ದರಿಂದ, ಹನಿಯ ನಡುವಿನಿಂದ ಅಂಚಿನವರೆಗೂ ಅದು ಕ್ರಮೇಣ ಹರಳು ಗಟ್ಟಿರುತ್ತದೆ.

ಹಾಲು ಕರೆಗಟ್ಟಿದ ವಿನ್ಯಾಸಗಳು“ಹಾಲಿನಶೇಕಡ ೩೦ರಷ್ಟು ನೀರುಬೆರೆಸಿದ್ದರೂ ಪತ್ತೆಮಾಡಬಲ್ಲವು. ಹಾಗೆಯೇ ಶೇಕಡ ೦.೪ರಷ್ಟು ಕಡಿಮೆಯೂರಿಯಾಬೆರಕೆಆಗಿದ್ದರೂಪತ್ತೆಮಾಡಬಲ್ಲವು” ಎನ್ನುತ್ತಾರೆಕುಮಾರ್.‌ ಈ ವಿಧಾನವನ್ನು ಬಳಸಲುಪ್ರಯೋಗಾಲಯಗಳಾಗಲಿ, ಇತರೆಉಪಕರಣಗಳಾಗಲಿಬೇಕಿಲ್ಲ. ಕುಗ್ರಾಮದಲ್ಲಿಯೂ ಇದನ್ನು ಸುಲಭವಾಗಿ ಬಳಸಬಹುದಂತೆ. “ಯಾವವಸ್ತು ಬೆರಕೆ ಆಗಿದೆ ಎನ್ನುವುದನ್ನು ಅವಲಂಬಿಸಿ ಈ ವಿನ್ಯಾಸಗಳು ಕರೆಗಟ್ಟುವುದರಿಂದ ಹಾಲಿನಂತಹ ಆವಿಯಾಗುವ ಬೇರೆವಸ್ತುಗಳಲ್ಲಿನ ವಿವಿಧ ಕಲಬೆರಕೆಯನ್ನು ಪತ್ತೆಮಾಡಲೂ ಇದು ನೆರವಾಗಬಹುದು,” ಎನ್ನುವುದು ದಾಶ್‌ ಅವರ ಆಶಯ.

“ಹಾಲಿನಲ್ಲಿ ಬೆರೆತಿರಬಹುದಾದ ಎಣ್ಣೆ ಹಾಗೂ ಇತರೆ ವಸ್ತುಗಳು ರಚಿಸುವ ವಿನ್ಯಾಸಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ಇವೆಲ್ಲ ವಿನ್ಯಾಸಗಳನ್ನೂ ಪತ್ತೆಮಾಡಿದ ಮೇಲೆ, ಹಾಲಿನಹನಿಯನ್ನು ಒಣಗಲುಬಿಟ್ಟು, ರೂಪುಗೊಂಡ ಕರೆಯ ವಿನ್ಯಾಸದ ಚಿತ್ರವನ್ನು ತೆಗೆದು, ಹೋಲಿಸಿ, ಯಾವ ವಸ್ತು ಕಲಬೆರಕೆಯಾಗಿದೆ ಎಂದು ನಿರ್ದಿಷ್ಟವಾಗಿ ಹೇಳಲೂ ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಪ್ರಯೋಗಗಳನ್ನು ನಡೆಸಿದ್ದೇವೆ” ಎನ್ನುತ್ತಾರೆದಾಶ್.‌

 

ವರದಿ: ಕುತೂಹಲಿ ತಂಡ.

Key words: new method – detecting- adulteration – milk