ದೇಶದಲ್ಲಿ ಇಂದು 20 ಮಂದಿಗೆ ಹೊಸ ಕೊರೋನಾ ರೂಪಾಂತರ ದೃಢ…

ನವದೆಹಲಿ.ಜನವರಿ,5,2021(www.justkannada.in):  ತೀವ್ರ ಆತಂಕಕ್ಕೀಡು ಮಾಡುತ್ತಿರುವ ಬ್ರಿಟನ್ ಹೊಸ ಕೊರೋನಾ ರೂಪಾಂತರ ಭಾರತದಲ್ಲೂ  ಹರಡುತ್ತಿದೆ. ಈ ಮಧ್ಯೆ ಇಂದು 20 ಮಂದಿಗೆ ಕೊರೋನಾ ಹೊಸ ಪ್ರಭೇಧದ ಸೋಂಕು ಪತ್ತೆಯಾಗಿದೆ.jk-logo-justkannada-mysore

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಬ್ರಿಟನ್ ನಿಂದ ಭಾರತಕ್ಕೆ ಬಂದರ ಪೈಕಿ ಇಂದು 20 ಮಂದಿಗೆ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ.New Corona - confirmed - 20 people – country- today.

ದೇಶದಲ್ಲಿ ದಿನದಿಂದ ದಿನಕ್ಕೆ ರೂಪಾಂತರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ದೇಶದ ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ. ಇನ್ನು ಬೆಂಗಳೂರಿನಲ್ಲೂ ಒಬ್ಬರಿಗೆ ಕೊರೋನಾ ರೂಪಾಂತರ ಪತ್ತೆಯಾಗಿದೆ ಎನ್ನಲಾಗಿದೆ.

Key words: New Corona – confirmed – 20 people – country- today.