ನೆಟ್ ಫ್ಲಿಕ್ಸ್ ನಲ್ಲಿ ಕನ್ನಡ ಕಲರವ: ರೀಲ್ ನಲ್ಲಿ ರಿಯಲ್ ಪೊಲೀಸರು ಹವಾ..! ಟ್ರೇಲರ್ ಗೆ ಸಕತ್ ರೆಸ್ಪಾನ್ಸ್

kannada t-shirts

ಮೈಸೂರು,ಸೆಪ್ಟಂಬರ್,15,2021(www.justkannada.in):  ಕೊರೊನಾ ಬಂದ ಮೇಲಂತೂ ಸಿನಿಮಾ ಮಂದಿರಗಳನ್ನು ಜನರು ಮರೆತೆ ಬಿಟ್ಟರು. ಈಗೇನಿದ್ದರೂ ಓಟಿಟಿ ಜಮಾನ. ಹೊಸ ಸಿನಿಮಾ, ವೆಬ್ ಸೀರೀಸ್ ಗಳು ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗುತ್ತಲೇ ಇವೆ. ಜನ ಅಂಗೈನಲ್ಲೇ ಒಟಿಟಿ ಮೂಲಕ ಸಿನಿಮಾ‌, ಸಾಕ್ಷ್ಯಚಿತ್ರಗಳನ್ನು ಆಸ್ವಾಧಿಸುತ್ತಿದ್ದಾರೆ. ಇಂತಹ ನೆಟ್ ಫ್ಲಿಕ್ಸ್ ನಲ್ಲಿ ಇದೀಗ ಕನ್ನಡದ ಕಲರವ ಕೇಳಿ ಬರುತ್ತಿದ್ದು, ಕನ್ನಡಿಗರು ಸಕತ್ ಥ್ರಿಲ್ ಆಗಿದ್ದಾರೆ.

ನೆಟ್ ಫ್ಲಿಕ್ಸ್ ಅವರೇ ಪ್ರೊಡಕ್ಷನ್ ಮಾಡಿರುವ ಕನ್ನಡದ ಸಾಕ್ಷ್ಯಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದೆ. ಈ ರೀತಿ ತಯಾರಾದ ಮೊದಲ ಕನ್ನಡದ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ನಮ್ಮ ಬೆಂಗಳೂರು ಪೊಲೀಸರು ಭೇದಿಸಿರುವ ನಾಲ್ಕು ಪ್ರಕರಣಗಳ ರೋಚಕ ಕಥೆ ಈ ಸಾಕ್ಷ್ಯಚಿತ್ರದಲ್ಲಿದೆ.

ಸದ್ಯ ಇದರ ಟ್ರೇಲರ್  ಸದ್ದು ಮಾಡುತ್ತಿದ್ದು, ಒಂದೇ ದಿನದಲ್ಲಿ 2 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಇದು ನಮ್ಮ ನೆಲದ ಕಥೆಯನ್ನು ಹೊಂದಿದೆ ಎಂಬುದೇ ಸದ್ಯ ಕನ್ನಡಿಗರ ಸಂಭ್ರಮಕ್ಕೆ ಕಾರಣವಾಗಿದೆ. ಕ್ರೈಮ್ ಇನ್ವೆಸ್ಟಿಗೇಶನ್ ಬಗ್ಗೆ 4 ಭಾಗಗಳಾಗಿ ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಟ್ರೇಲರ್ ನಲ್ಲಿ ಬೆಂಗಳೂರು ಡಿಸಿಪಿ ಅನುಚೇತ್, ಮಂಗಳೂರಿನ ಪೊಲೀಸ್ ಆಯುಕ್ತ ಶಶಿಕುಮಾರ್ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ನಿರ್ದೇಶಕರು ಯಾರು, ಯಾರೆಲ್ಲಾ ಅಭಿನಯಿಸಿದ್ದಾರೆ ಎಂಬಿತ್ಯಾದಿ ಮಾಹಿತಿ ಸೆ.22 ಕ್ಕೆ ರಿವೀಲ್ ಆಗಲಿದ್ದು, ಕನ್ನಡಿಗರು ಸಾಕ್ಷ್ಯಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

Key words: Netflix- Kannada -Real -police – reel-Response -Trailer

ENGLISH SUMMARY…

Kannada movie trailer goes viral on Netflix
Mysuru, September 15, 2021 (www.justkannada.in): Following the COVID-19 Pandemic, the people have almost forgotten to go to cinema theatres. Now it is the OTT era. A lot of new films are being released on various OTT platforms like Amazon and Netflix. It has enabled people to watch movies, documentaries, and other programs on their palms. It is now the turn of Kannada language movie makers to use the OTT platform. A Kannada movie is making a big sound on the OTT platform, giving a thrill to Kannadigas.
A Kannada film produced by ‘Netflix’ is making a sound. It is the first Kannada movie produced, exclusively for the OTT platform. The film is based on four different crime stories cracked by the Bengaluru Police.
Presently the trailer of this movie has been released and has gone viral, with more than 2 lakh views. The fact that the movie is based on a story that has taken place in Karnataka has thrilled the viewers. The movie has four parts on crime investigation.
Bengaluru DCP Anucheth, Mangalore Police Commissioner Shashikumar has drawn the attention by appearing in the trailers. Other details, like the names of the Director, Producer, actors, will be revealed on September 22. In the meantime lakhs of Kannadigas are keenly waiting for its release.
Keywords: OTT/ Netflix/ Kannada movie/ Police officers/ viral

website developers in mysore