ರಾಜ್ಯದಲ್ಲಿ ‌ಎನ್ ಇಪಿ‌ ರದ್ದುಗೊಳಿಸಿ ಹೊಸದಾಗಿ ಎಸ್ ​ಇಪಿ‌ ಅನುಷ್ಠಾನ-ಸಚಿವ ಮಧು ಬಂಗಾರಪ್ಪ

Promotion

ಶಿವಮೊಗ್ಗ, ಸೆಪ್ಟಂಬರ್,16,2023(www.justkannada.in):  ರಾಜ್ಯದಲ್ಲಿ ‌ಎನ್​ ಇಪಿ‌ ರದ್ದುಪಡಿಸಲಾಗಿದ್ದು, ಈಗ ಹೊಸದಾಗಿ ಎಸ್​ಇಪಿ‌ ಅನುಷ್ಠಾನಗೊಳ್ಳಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪಿಯುಸಿ ಪೂರಕ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆ ಒಂದೊಂದೇ ಈಡೇರಿಸುತ್ತಿದ್ದೇವೆ ಎಂದರು.

ಶಿವಮೊಗ್ಗ ಜಿಲ್ಲೆಯ 7 ತಾಲೂಕು ಬರಪೀಡಿತ ಎಂದು ಘೋಷಿಸಲಾಗಿದ್ದು,  ಬರ ಪರಿಹಾರ ನೀಡುವ ಬಗ್ಗೆ ‌ಕ್ರಮ ವಹಿಸಲಾಗುತ್ತದೆ ಎಂದು  ಸಚಿವ ಮಧು ಬಂಗಾರಪ್ಪ ತಿಳಿಸಿದರು.

Key words: NEP cancel- implement -new -SEP –Minister- Madhu Bangarappa