ಸರ್ಕಾರ ಬೀಳಿಸಲು 7ನೇ ಬಾರಿಗೆ ಯತ್ನ: ರಾಜ್ಯಪಾಲರ ಸಂದೇಶದ ಬಗ್ಗೆ ನಮಗೆ ನಿಮ್ಮ ರಕ್ಷಣೆ ಬೇಕು-ಸ್ಪೀಕರ್ ಬಳಿ ಸಿಎಂ ಹೆಚ್. ಹೆಚ್.ಡಿ ಕುಮಾರಸ್ವಾಮಿ ಮನವಿ..

Promotion

ಬೆಂಗಳೂರು,ಜು,19,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರವನ್ನ ಬೀಳಿಸಲು ಬಿಜೆಪಿ 7ನೇ ಬಾರಿಗೆ ಯತ್ನಿಸಿದ್ದಾರೆ. ರಾಜ್ಯಪಾಲರ ಸಂದೇಶದ ಬಗ್ಗೆ ನಮಗೆ ನಿಮ್ಮ ರಕ್ಷಣೆ ಬೇಕು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪೀಕರ್ ಬಳಿ ಮನವಿ ಮಾಡಿದರು.

ವಿಧಾನಸಭೆಯಲ್ಲಿ ಇಂದು ವಿಶ್ವಾಸ ಮತಯಾಚನೆ ಪ್ರಸ್ತಾವ ಮೇಲೆ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯಪಾಲರ ಮೇಲೆ ನನಗೆ ಅಪಾರ ಗೌರವವಿದೆ.  ಅವರು ನನಗೆ ಒಂದು ಲೆಟರ್ ಕೊಟ್ಟಿದ್ದಾರೆ. ಕುದುರೆ ವ್ಯಾಪಾರದ ಬಗ್ಗೆ ಗಮನಕ್ಕೆ ಬಂದಿದೆ  ಎಂದಿದ್ದಾರೆ. ಆದರೆ ಇದಕ್ಕೂ ಮೊದಲು  ನಡೆದ ಕುದುರೆ ವ್ಯಾಪಾರದ ಬಗ್ಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಇದೇ ವೇಳೇ ಬಿಜೆಪಿ ವಿರುದ್ದ ಕಿಡಿಕಾರಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಾಲಮನ್ನಾ ಮಾಡಿಲ್ಲ. ಬರಪರಿಸ್ಥಿತಿ ನಿರ್ವಹಿಸಿಲ್ಲ ಎಂದು ಸದನದ ಹೊರಗೆ ಬಿಜೆಪಿ ನಾಯಕರು ಆರೋಪಿಸುತ್ತಾರೆ. ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿಲ್ಲ ಅಂತಾರೆ. ಅದರೆ ಅವರ ಆಪ್ತರೇ ವಿಮಾನಕ್ಕೆ ಹತ್ತಿಸಿ ಕಳುಹಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್ ಜತೆ ಆರ್. ಅಶೋಕ್ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಶಾಸಕರ ರಾಜೀನಾಮೆಯಿಂದ ಗಾಬರಿಯಾಗಲ್ಲ. ಈ ಜಾಗಕ್ಕೆ ಅಂಟಿಕೂತವನ್ನ ನಾನಲ್ಲ. ನಾನು ಅಧಿಕಾರಕ್ಕೆ ಅಂಟಿಕೊಂಟು ಕೂರುವ ವ್ಯಕ್ತಿಯಾಗಿದ್ರೆ ಅಮೇರಿಕಾದಿಂದ ಓಡಿ ಬರುತ್ತಿದ್ದೆ. ಆದರೆ ನಾನು ಅಧಿಕಾರಕ್ಕಾಗಿ ಅಂಟಿಕೊಂಡು ಕೂರಿಲ್ಲ. ಇನ್ನು ರಾಜ್ಯಪಾಲರೇ ಅತೃಪ್ತ ಶಾಸಕರಿಗೆ ರಕ್ಷಣೆ ಕೊಡುವಂತೆ ಹೇಳಿದ್ದಾರೆ. ಅವರು ಉತ್ತಮ ಕೆಲಸ ಮಾಡಿರಬೇಕು ಅಂತಾ ಹೇಳಿರಬೇಕು. ಈ ನಾಟಕ ನೋಡಿ ಎಲ್ಲರಿಗೂ ಬುದ್ಧಿ ಬರಬೇಕು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಜನ ಗೂಳೆ ಹೋಗಬಾರದು ಅಂತಾ 10 ಕೋಟಿ ಉದ್ಯೋಗ ಕೊಟ್ಟಿದ್ದೇವೆ. ಆದ್ರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಹಣ ಸರಿಯಾಗಿ ನೀಡಿಲ್ಲ ಹಾಗೆಯೇ ಬಿಜೆಪಿ ನಾಯಕರು ನನ್ನ ಗ್ರಾಮ ವಾಸ್ತವ್ಯದ ಬಗ್ಗೆ ಡ್ರಾಮ ಎಂದು ಟೀಕಿಸಿದರು. ಒಂದು ವರ್ಷ ಕೆಲಸ ಮಾಡಲು ಬಿಡಲಿಲ್ಲ ಎಂದು  ಕಿಡಿಕಾರಿದರು.

Key words: need -your protection – governor’s –message-CM HD Kumaraswamy