ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ನಟಿಯ ಮನೆ ಮೇಲೆ ಎನ್ ಸಿಬಿ ದಾಳಿ.

Promotion

ಮುಂಬೈ,ಅಕ್ಟೋಬರ್, 21,2021(www.justkannada.in):  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿಂತೆ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಈಗಾಗಲೇ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದು ಈ ಬೆನ್ನಲ್ಲೆ ನಟ ಶಾರುಖ್ ಖಾನ್ ಹಾಗೂ ನಟಿ ಅನನ್ಯ ಪಾಂಡೆ ಅವರ ನಿವಾಸಗಳ ಮೇಲೆ ಇಂದು ದಿಢೀರ್ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿಯಿಂದ ಬಂಧನಕ್ಕೊಳಗಾಗಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಗೆ ಜಾಮೀನು ನೀಡಲು ನಿನ್ನೆ ಕೋರ್ಟ್ ನಿರಾಕರಿಸಿತ್ತು. ಈ ಮಧ್ಯೆ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಇನ್ನು ಇಂದು ಬೆಳಿಗ್ಗೆ ಪುತ್ರ ಆರ್ಯನ್ ಖಾನ್ ನನ್ನ ನಟ ಶಾರುಖ್ ಖಾನ್ ಭೇಟಿ ಮಾಡಿದ್ದರು. ಈ ಬೆನ್ನಲ್ಲೆ ನಟ ಶಾರುಖ್ ಖಾನ್ ಮನೆಯ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಂದು ಏಕಾಏಕಿ ಮುಂಬೈನ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ಅನನ್ಯಾ ಪಾಂಡೆ ನಿವಾಸಗಳ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಡ್ರಗ್ಸ್ ಪ್ರಕರಣ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ. ನಟಿ ಅನನ್ಯ ಪಾಂಡೆ  ಆರ್ಯನ್ ಖಾನ್ ಸ್ನೇಹಿತೆಯಾಗಿದ್ದಾರೆ.

Key words: NCB- attacked -Bollywood -actor -Shah Rukh Khan – house