ಮೈಸೂರಿನಲ್ಲಿ ನವರಾತ್ರಿ ಪೂಜೆಗೆ ಖರೀದಿ ಜೋರೋ ಜೋರು : ಗಗನಕ್ಕೇರಿದ ಹೂಗಳ ಬೆಲೆ….

ಮೈಸೂರು,ಅಕ್ಟೋಬರ್,18,2020(www.justkannada.in) : ಕೊರೊನಾ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿ ಸರಳ ಸಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತಿದೆ. ಈ ಮಧ್ಯೆ ನವರಾತ್ರಿ ಪೂಜೆಗೆ ಖರೀದಿ ಜೋರಾಗಿದೆ.

jk-logo-justkannada-logo

ಹೌದು, ದಸರಾ ನವರಾತ್ರಿ ಪೂಜೆ ಹಿನ್ನೆಲೆಯಲ್ಲಿ ನಗರದ ಹೃದಯಭಾಗದಲ್ಲಿರುವ ದೇವರಾಜ ಮಾರುಕಟ್ಟೆಯಲ್ಲಿ ಕೊರೊನಾ ಭೀತಿಯಿಲ್ಲದೇ ಹೂಗಳ ಖರೀದಿಗೆ ಗ್ರಾಹಕರು ಮುಗಿಬಿದ್ದ ದೃಶ್ಯ ಕಂಡು ಬಂದಿತು. ಸರಳ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದ್ದರೂ ಸಹ ಹೂ ಹಣ್ಣುಗಳ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ.

ಗಗನಕ್ಕೇರಿದ ಹೂಗಳ ಬೆಲೆ

Navratri-Worship-Cultural-City-Price-Celestial- Flowers

 

ಇನ್ನು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರ ಲಗ್ಗೆ ಇಡುತ್ತಿದ್ದಂತೆ ಗ್ರಾಹಕರನ್ನು ಕಂಡು ವ್ಯಾಪಾರಿಗಳು ಕೂಡಲೇ ಹೂ ಬೆಲೆ ಹೆಚ್ಚಿಸಿದರು. ಮಲ್ಲಿಗೆ ಹೂವು 1200 ರಿಂದ 1500 ರೂಗೆ, ಕಾಕಡ ಹೂವು 800 ರಿಂದ 1000 ರೂಗೆ. ಸೇವಂತಿಗೆ ಒಂದು ಕೈ (20 ಮಾರು) 1200 ರಿಂದ 1500 ರೂ. ಗುಲಾಬಿ ಕೆಜಿ 250 ರಿಂದ 300 ರೂ. ಕನಕಾಂಬರ 800 ರಿಂದ 1000 ರೂ. ಗೆ ಏರಿಕೆ ಮಾಡಿದರು.

ಕೊರೊನಾ ಭೀತಿಯಿಲ್ಲ, ಸಾಮಾಜಿಕ ಅಂತರವಿಲ್ಲNavratri-Worship-Cultural-City-Price-Celestial- Flowersಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿಯೂ, ಜನರಲ್ಲಿ ಕೊರೊನಾ ಕುರಿತು ಯಾವುದೇ ಭೀತಿ ಕಾಣುತ್ತಿಲ್ಲ. ಸಾಮಾಜಿಕ ಅಂತರವನ್ನು ಮರೆತು ಹೂಗಳ ಖರೀದಿಯಲ್ಲಿ ಮುಗಿಬಿದ್ದಿದ್ದು, ಮಾರುಕಟ್ಟೆಯಲ್ಲಿ ಕಂಡು ಬಂತು.

key words : Navratri-Worship-Cultural-City-Price-Celestial- Flowers