ಚಾಮುಂಡೇಶ್ವರಿ ಬೆಟ್ಟದಲ್ಲಿ ನವರಾತ್ರಿ ಉತ್ಸವ: ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ.

kannada t-shirts

ಮೈಸೂರು,ಅಕ್ಟೋಬರ್,8,2021(www.justkannada.in): ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಾರಂಭವಾಗಿದ್ದು ಚಾಮುಂಡೇಶ್ವರಿ ಬೆಟ್ಟದಲ್ಲಿ ನವರಾತ್ರಿ ಉತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಬೆಳಗ್ಗೆ 7 ರಿಂದ ಸಂಜೆ 6ವರಗೆ ಮಾತ್ರ ತಾಯಿ ಚಾಮುಂಡೇಶ್ವರಿ  ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.  ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಅಚರಣೆಗಳು ನಡೆಯಲಿದ್ದು, ಇಂದು ತಾಯಿ ಚಾಮುಂಡೇಶ್ವರಿ ದೇವಿಗೆ ಮಹೇಶ್ವರಿ ಆಲಂಕಾರ ಮಾಡಲಾಗುತ್ತದೆ.

ಇದೇ ರೀತಿ ಪ್ರತಿ ದಿನವೂ ನಾಡಿನ ಅಧಿದೇವತೆ ವಿವಿಧ ಆಲಂಕಾರದಲ್ಲಿ ಕಂಗೊಳಿಸಲಿದ್ದು ಸಾರ್ವಜನಿಕರು ನೋಡಿ ಕಣ್ತುಂಬಿಕೊಳ್ಳಬಹುದು. ನಿನ್ನೆ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗಿದ್ದು ಈ ಹಿನ್ನೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ENGLISH SUMMARY…

Navarathri Utsav atop Chamundi hills: Public entry permitted
Mysuru, October 8, 2021 (www.justkannada.in): The Mysuru district administration has permitted the entry of public to participate in the Navarathri Utsav that takes place atop the Chamundi hills.
The public has been allowed to have the darshan of goddess Chamundeshwari from 7.00 am to 6.00 pm. Various programs including pooja rituals have been organized.
Devotees can see the various special ‘alankaras’ of the deity that is done especially during Navarathri.
Keywords: Chamundi hills/ public entry allowed/ darshan/ alankaras

Key words: Navaratri Festival – Chamundeshwari Hill- Access – Public

website developers in mysore