ಪ್ರತಿಯೊಬ್ಬ ಮತದಾರ ಜಾಗೃತನಾಗಿ ಚುನಾವಣೆಯಲ್ಲಿ ಭಾಗವಹಿಸಿದರೇ ಮಾತ್ರ ಉತ್ತಮ ಆಡಳಿತಗಾರನ ಆಯ್ಕೆ ಸಾಧ್ಯ-ರಾಮಚಂದ್ರ ಡಿ ಹುದ್ದಾರ್

ಮೈಸೂರು,ಜನವರಿ,25,2021(www.justkannada.in): ಪ್ರತಿಯೊಬ್ಬ ಮತದಾರ ಜಾಗೃತನಾಗಿ, ಸಕ್ರಿಯವಾಗಿ ಚುನಾವಣೆಯಲ್ಲಿ ಭಾಗವಹಿಸಿದರೇ ಮಾತ್ರ ಉತ್ತಮ ಆಡಳಿತಗಾರನ ಆಯ್ಕೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಸಂದೇಶ ನೀಡಿದರು.national-voter-day-every-voter-participates-election-mysore-ramachandra-d-huddar

ಇಂದು ರಾಷ್ಟ್ರೀಯ ಮತದಾರ ದಿನಾಚರಣೆ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಟೌನ್ ಹಾಲ್ ನಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನ ಜಿಲ್ಲಾ ಸತ್ರ  ನ್ಯಾಯಾಧೀಶ  ರಾಮಚಂದ್ರ ಡಿ ಹುದ್ದಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್,  ಪ್ರತಿಯೊಬ್ಬ ಮತದಾರ ಯಾವುದೇ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಉತ್ತಮ ಆಡಳಿತಕ್ಕೆ ಸಹಕರಿಸಬೇಕಿದೆ. ಚುನಾವಣೆಗಳಲ್ಲಿ ಕಡಿಮೆ ಮತದಾನ ಆಗುತ್ತಿದೆ. ಪ್ರತಿಯೊಬ್ಬ ಮತದಾರ ಜಾಗೃತನಾಗಿ ಸಕ್ರಿಯವಾಗಿ ಚುನಾವಣೆಯಲ್ಲಿ ಭಾಗವಹಿಸಬೇಕು. ಆಗ ಮಾತ್ರ ಉತ್ತಮ ಆಡಳಿತಗಾರನ ಆಯ್ಕೆ ಸಾಧ್ಯ ಎಂದು ನುಡಿದರು.national-voter-day-every-voter-participates-election-mysore-ramachandra-d-huddar

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ. ಜಿಲಾಪಂಚಾಯತ್ ಸಿಇಒ ಪರಮೇಶ, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಎಡಿಸಿ ಮಂಜುನಾಥ್ ಸ್ವಾಮಿ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಭಾಗಿಯಾಗಿದ್ದರು.

Key words:  National Voter Day -every- voter -participates – election- mysore-Ramachandra D Huddar.