ಮಾರ್ಚ್ 26ರಿಂದ ಮೈಸೂರಿನಲ್ಲಿ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌

ಬೆಂಗಳೂರು, ಮಾರ್ಚ್ 01, 2020 (www.justkannada.in): ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 19 ನೇ ಆವೃತ್ತಿಯನ್ನು ಮಾರ್ಚ್ 26 ರಿಂದ 28 ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ ಅರ್ಹತಾ ಪಂದ್ಯವಿದಾಗಿದ್ದು ಸ್ಪರ್ಧೆಯು 1,600 ಕ್ರೀಡಾಪಟುಗಳಿಗೆಹೆಚ್ಚಿನ ಉತ್ಸಾಹ ನೀಡಲಿದೆ. ವಿವಿಧ ವಿಭಾಗಗಳಲ್ಲಿ ದೇಶದ ನಾನಾ ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹಾ ಅಭೂತಪೂರ್ವ ಟೂರ್ನಿ ನಡೆಯುತ್ತಿದೆ.

ಟಿ ಮರಿಯಪ್ಪನ್, ವರುಣ್ ಸಿಂಗ್ ಭತಿ ಮತ್ತು ಜಾವೆಲಿನ್ ಎಸೆತಗಾರ ಸುಂದರ್ ಸಿಂಗ್ ಗುರ್ಜಾರ್ ಸೇರಿದಂತೆ ಹೈಜಂಪರ್‌ಗಳು ಈ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಕ್ರೀಡಾ ಸಚಿವಾಲಯದಿಂದ ಗುರುತಿಸಲ್ಪಟ್ಟಬಳಿಕ ಹೊಸದಾಗಿ ಚುನಾಯಿತರಾದ ಪ್ಯಾರಾಲಿಂಪಿಕ್ ಸಮಿತಿ (ಭಾರತದ ಪಿಸಿಐ) ಸಂಸ್ಥೆ ಆಯೋಜಿಸಿರುವ ಮೊದಲ ಕೂಟ ಇದಾಗಲಿದೆ.