ಪ್ರಧಾನಿ ಮೋದಿ ಅವರ ಮಾತು ಹೊಸ ಚೈತನ್ಯ ತುಂಬಿದವು : ಹಿಂದಿಯಲ್ಲೇ ಧನ್ಯವಾದ ಹೇಳಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

kannada t-shirts

.

ಮೈಸೂರು, ಅ.19, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 100 ನೇ ಘಟಿಕೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳು ನಮಗೆ ಹೊಸ ಚೈತನ್ಯವನ್ನು ತುಂಬಿದವು ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಧನ್ಯವಾದ ಹೇಳಿದರು.

ಪ್ರಧಾನಿ ಘಟಿಕೋತ್ಸವ ಭಾಷಣದ ಬಳಿಕ ಹಿಂದಿಯಲ್ಲೇ ಮಾತನಾಡಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಧನ್ಯವಾದ ಹೇಳಿದ್ದು ಹೀಗೆ,,.

ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು 130 ಕೋಟಿ ಭಾರತೀಯರಿಗೆ ಭರವಸೆ ಮತ್ತು ಧೈರ್ಯದ ದಾರಿದೀಪವಾಗಿ ಹೊರಹೊಮ್ಮಿದ್ದಾರೆ. ಕಠಿಣ ಪರಿಶ್ರಮ ಮತ್ತು ಏಕ ಮನಸ್ಸಿನ ಸಮರ್ಪಣೆಯ ಮೂಲಕ ನಮ್ಮ ವಿಶಾಲ ರಾಷ್ಟ್ರವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಅವರು ಗಳಿಸಿದ್ದಾರೆ.

 narendra-modi-pm-mysore-university-convocation-100-years

ಅವರ ಅಪಾರ ದೇಶಭಕ್ತಿ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಅಸಾಧಾರಣ ಗ್ರಹಿಕೆಯು ಮೋದಿ ಅವರನ್ನು ವಿಶ್ವದ ಅಗ್ರಗಣ್ಯ ನಾಯಕರ ಸಾಲಿನಲ್ಲಿ ನಿಲ್ಲಿಸಿದೆ. ನರೇಂದ್ರ ಮೋದಿಜಿ ರಾಷ್ಟ್ರವನ್ನು ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಿಸುವ ಹೊಸ ಶಕ್ತಿ. ದೇಶವನ್ನು ಮುಂದೆ ಕೊಂಡೊಯ್ಯುವ ಏಕೈಕ ಗುರಿಯೊಂದಿಗೆ ಅವಿರತ ಶ್ರಮಿಸುತ್ತಿರುವ ಪ್ರಧಾನಿ ಅವರಿಗೆ ನಮ್ಮ ನಮ್ರತೆಯ ಕೃತಜ್ಞತೆ.
ಮೈಸೂರು ವಿಶ್ವವಿದ್ಯಾನಿಲಯದ 100 ನೇ ಘಟಿಕೋತ್ಸವದಲ್ಲಿ ಪ್ರಧಾನ ಮಂತ್ರಿ ಭಾಷಣ ಮಾಡಿದ್ದು, ಮೈಸೂರಿಗರ ಅದೃಷ್ಟ. ಅವರ ಈ ನುಡಿಗಳು, ನಮಗೆ ಹೆಚ್ಚಿನ ಸಾಧನೆ ಮಾಡಲು ಶಕ್ತಿಯನ್ನು ಮತ್ತು ಚೈತನ್ಯವನ್ನು ಇಮ್ಮಡಿಗೊಳಿ ಪ್ರೇರೇಪಿಸುತ್ತದೆ ಎಂದು ಧನ್ಯವಾದ ಹೇಳಿದರು.

 narendra-modi-pm-mysore-university-convocation-100-years

oooo

key words : narendra-modi-pm-mysore-university-convocation-100-years

website developers in mysore