ಸಮಸ್ಯೆ ಬಗೆಹರಿಯುವವರೆಗೂ ಚುನಾವಣೆ ಬೇಡ: ಗ್ರಾಮಸ್ಥರ ‘ಪಂಚಾಯಿತಿ’

ಮೈಸೂರು, ಡಿಸೆಂಬರ್ 06, 2020 (www.justkannada.in): ಉದ್ಯೋಗದಿಂದ ವಂಚಿತರಾಗಿ ಸಿಡಿದೆದ್ದ ಗ್ರಾಮಸ್ಥರು ನಾಲ್ಕು ಗ್ರಾಮಗಳ ಪಂಚಾಯತಿ ಚುನಾವಣೆ ಬಹಿಷ್ಕಾರಿಸಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ ಆರಂಭದಲ್ಲೇ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿರುವ ಹಳ್ಳಿಗರು. ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡುತ್ತಿದ್ದಾರೆ.

ನಂಜನಗೂಡು ತಾಲ್ಲೂಕಿನ ಇಮ್ಮಾವು, ಹುಳಿಮಾವು, ಹಿಮ್ಮಾವುಹುಂಡಿ, ಬಕ್ಕಳ್ಳಿ ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ತಹಸೀಲ್ದಾರ್ ಮಹೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೂ ಪಂಚಾಯತಿ ಚುನಾವಣೆ ಬೇಡ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಏಷಿಯನ್ ಪೆಂಟ್ಸ್ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಸಿಗದ ಕೆಲಸ. ಇದರಿಂದ ಮನನೊಂದ ಗ್ರಾಮಸ್ಥರಿಂದ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೆಂಟ್ಸ್. ಗೆ ಕೃಷಿ ಭೂಮಿ ಪಡೆದು ಬಳಿಕ ಸ್ಥಳೀಯರಿಗೆ ಉದ್ಯೋಗ ನೀಡದ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.