ತಾಲ್ಲೂಕು ವೈದ್ಯಾಧಿಕಾರಿ ಸಾವಿಗೆ ಕಾರಣವೇನು ಗೊತ್ತೆ…?

ಮೈಸೂರು,ಆ,20,2020(www.justkannada.in):  ಮೇಲಾಧಿಕಾರಿಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾದ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಂದ್ರ ಅವರ ಸಾವಿಗೆ ಕಾರಣ ಏನೆಂಬುದು ಬಹಿರಂಗವಾಗಿದೆ.nanjanagud –taluk  health officer-suciude-reason-letter- DHO

ನಗರದ ಆಲನಹಳ್ಳಿ ಲೇಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ  ನಾಗೇದ್ರ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಮೇಲಾಧಿಕಾರಿಗಳ ಕಿರುಕುಳ ಆರೋಪ ಕೇಳಿ ಬಂದಿದೆ. ಕೋವಿಡ್ 19 ಸಂದರ್ಭದಲ್ಲಿ ನಿರಂತರವಾಗಿ ಕೆಲಸ  ಮಾಡಿದ್ದ ನಾಗೇಂದ್ರ ಅವರು ತಮ್ಮ ಕೆಲಸದ ಒತ್ತಡದ ಬಗ್ಗೆ ಕುಟುಂಬದವರೊಡನೆ ಅಳಲು ತೋಡಿಕೊಂಡಿದ್ದರು.

ತಾಲ್ಲೂಕು ವೈದ್ಯಾಧಿಕಾರಿ ಸಾವಿಗೆ ಕಾರಣವೇನು…?

ಮೃತ ತಾಲ್ಲೂಕು ಆರೋಗ್ಯಾಧಿಕಾರಿ  ನಾಗೇಂದ್ರ ಅವರು ಆಗಸ್ಟ್ 10 ರಂದು ಮೈಸೂರು ಡಿಹೆಚ್ ಒ ಅವರಿಗೆ ಪತ್ರ ಬರೆದು ಪ್ರಭಾರ ಹುದ್ದೆಯಿಂದ ತಮ್ಮನ್ನ ವಿಮುಕ್ತಗೊಳಿಸುವಂತೆ ಮನವಿ ಮಾಡಿದ್ದರು. ಕಳೆದ ಜನವರಿಯಿಂದ ನಂಜನಗೂಡು ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದರಿಂದಾಗಿ ನನಗೆ ಕಾರ್ಯ ಒತ್ತಡ ಹೆಚ್ಚಾಗಿದ್ದು ಹೀಗಾಗಿ ಪ್ರಭಾರ ಹುದ್ದೆಯಿಂದ ರಿಲೀವ್ ಮಾಡಿ ಎಂದು ಡಿಎಚ್ ಒಗೆ ಪತ್ರ ಬರೆದಿದ್ದರು.

ಜತೆಗೆ ಟ್ವೀಟ್ ಮಾಡಿದ್ದ ನಾಗೇಂದ್ರ ಅವರು,  ಸಿಇಒ ಕಠಿಣ ರೀತಿಯಲ್ಲಿ ವರ್ತಿಸುತ್ತಿದ್ದಾರೆ.  ಎಲ್ಲದಕ್ಕೂ ನಮ್ಮನ್ನ ಜವಾಬ್ದಾರಿಯನ್ನಾಗಿ ಮಾಡುತ್ತಿದ್ದಾರೆ. ನಾವು ಏನೇ ಹೇಳಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ನಾನು ಹೇಳುವುದನ್ನ ಕೇಳು ಎಂದು ನಮಗೆ ಹೇಳುತ್ತಿದ್ದರು ಎಂದು ಟ್ವೀಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಹೀಗೆ ಮಾನಸಿಕ ಖಿನ್ನತೆಗೊಳಗಾಗಿದ್ದ ಆರೋಗ್ಯಾಧಿಕಾರಿ ನಾಗೇಂದ್ರ ಅವರ ಈ ಪತ್ರಗಳು ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಕಡೆ  ಬೊಟ್ಟು ಮಾಡು ತೋರಿಸುತ್ತಿವೆ.

ಈ ಮಧ್ಯೆ  ಟಿಎಚ್ಓ ಡಾ. ನಾಗೇಂದ್ರ ಅವರ ಸಾವಿನ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಘಟನೆಯ ಸತ್ಯಾಂಶ  ತಿಳಿಯಲು ಸೂಕ್ತ ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ತನಿಖೆಯ ನಂತರ ಸತ್ಯಾಂಶ ಹೊರಬರುವ ವಿಶ್ವಾಸ ವ್ಯಕ್ತವಾಗಿದೆ.nanjanagud –taluk  health officer-suciude-reason-letter- DHO

ಹಾಗೆಯೇ ಮುಂದಿನ ದಿನಗಳಲ್ಲಿ ಕೊರೊನಾ ವಾರಿಯರ್ಸ್ ಹಿತ ಕಾಪಾಡಲು ಸರ್ಕಾರ ಬದ್ಧ ಏನೇ ಇದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಎನ್ನುವ ಮೂಲಕ ಸರ್ಕಾರ ನಿಮ್ಮ ಜೊತೆ ಇದೆ ಎಂದು ಸಚಿವ ಡಾ. ಸುಧಾಕರ್ ಅಭಯ ನೀಡಿದರು.

 

Key words: nanjanagud –taluk  health officer-suciude-reason-letter- DHO