ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಬಿರುಕು ಬಿಟ್ಟ ವಿಚಾರ: ಸ್ಥಳಕ್ಕೆ ಮೈಸೂರು ಮೇಯರ್ ಹಾಗೂ ಉಪಮೇಯರ್ ಭೇಟಿ, ಪರಿಶೀಲನೆ…

ಮೈಸೂರು,ಫೆ,20,2020(www.justkannada.in):  ನಗರದ ಹೃದಯಭಾಗದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಬಿರುಕು ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನಿಂ ಇಂದು ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಹಾಗೂ ನಂದಿ ವಿಗ್ರಹ ಬಿರುಕು ಬಿಟ್ಟಿದೆ. ಹೀಗಾಗಿ ಕೆ.ಆರ್ ಸರ್ಕಲ್ ನಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್  ಪ್ರತಿಮೆ ಸ್ಥಳಕ್ಕೆ  ಮೇಯರ್ ತಸ್ನೀಂ, ಉಪ ಮೇಯರ್ ಶ್ರೀಧರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೈಸೂರು ಮಹಾನಗರ ಪಾಲಿಕೆ ನಿರ್ವಹಣೆಯಲ್ಲಿದ್ದು, ಶೀಘ್ರದಲ್ಲಿ ಪ್ರತಿಮೆಯ ಬಿರುಕು ಸರಿಪಡಿಸಲು ಮೇಯರ್ ತಸ್ನೀಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೆಯೇ ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೂ ಭೇಟಿ ಕೊಟ್ಟ ತಂಡ ಪರಿಶೀಲನೆ ನಡೆಸಿತು. ಮೇಯರ್ ತಸ್ನೀಂ ವಿಗ್ರಹದ ಬಿರುಕು ಸರಿಪಡಿಸುವಂತೆ ಪತ್ರ ಬರೆಯಲಿದ್ದಾರೆ. ಬೆಟ್ಟದ ನಂದಿ ಪಾಲಿಕೆ ಲಾಂಛನವಾಗಿದೆ.

Key words: Nalwadi Krishnaraja Wodeyar -statue –cracked- Mysore Mayor – visit- Inspection.