ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ ’ಪಕ್ಷಕ್ಕೆ ಅಲ್ಪಸಂಖ್ಯಾತರಾಗುವ ಭಯ: ಸಚಿವ ಸಂಪುಟ ವಿಸ್ತರಣೆ ಕುರಿತು ನಳೀನ್ ಕುಮಾರ್ ಕಟೀಲ್ ಏನಂದ್ರು..

kannada t-shirts

ಚಿತ್ರದುರ್ಗ,ಡಿ,16,2019(www.justkannada.in):  ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಈಗಾಗಲೇ ದಿವಾಳಿ ಆಗಿದೆ. ಕಾಂಗ್ರೆಸ್ ’ಪಕ್ಷಕ್ಕೆ ಅಲ್ಪಸಂಖ್ಯಾತರಾಗುವ ಭಯ ಆವರಿಸಿದೆ ಎಂದು ಕಿಡಿಕಾರಿದರು.

ಚಿತ್ರದುರ್ಗ ಮುರುಘಾಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿ ಡಾ.ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಕಾಂಗ್ರೆಸ್ ಪಕ್ಷ ಈಗಾಗಲೇ ದಿವಾಳಿಯಾಗಿದೆ. ಕಾಂಗ್ರೆಸ್ ಬೌದ್ಧಿಕ, ಸಂಘಟನಾತ್ಮಕವಾಗಿ ದಿವಾಳಿಯಾಗಿದೆ. ಬ್ರಿಟಿಷರು ನಮ್ಮನ್ನ ಡಿವೈಡ್ ಅಂಡ್ ರೂಲ್ ಮಾಡುತ್ತಿದ್ದರು. ಬ್ರಿಟಿಷರು ಬಿಟ್ಟು ಹೋದ ಡಿವೈಡ್ ಅಂಡ್ ರೂಲ್ ಪಾಲಿಸಿ ಕಾಂಗ್ರೆಸ್ ಮುಂದುವರೆಸಿದೆ. ಪೌರತ್ವ ತಿದ್ದುಪಡಿಯಿಂದ ಮುಸ್ಲಿಂ ಸಮುದಾಯದವರಿಗೆ ತೊಂದರೆ ಇಲ್ಲ. ಅಲ್ಪಸಂಖ್ಯಾತರು ಗಟ್ಟಿ ಆಗುತ್ತಾರೆ ಬಿಜೆಪಿ ಮೇಲೆ ಮುಸ್ಲಿಂರಿಗೆ ನಂಬಿಕೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರಾಗುವ ಭಯ ಬಂದಿದೆ ಎಂದು ಲೇವಡಿ ಮಾಡಿದರು.

ಸಚಿವ ಸಂಪುಟ ಸ್ಥಾನಮಾನ ಸಿಎಂ ಅವರ ಪರಮಾಧಿಕಾರ….

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ಸಚಿವ ಸಂಪುಟ ಸ್ಥಾನಮಾನ ಸಿಎಂ ಅವರ ಪರಮಾಧಿಕಾರ. ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜ್ಯಾಧ್ಯಕ್ಷರ ಹಸ್ತಕ್ಷೇಪವಿಲ್ಲ, ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದರು.

ಶಾಸಕರಿಗೆ ಸಚಿವರಾಗುವ ಆಸೆ ಸಹಜವಾಗಿ ಇರುತ್ತದೆ. ಎಲ್ಲಾ ಜಿಲ್ಲೆಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

key words: Nalin Kumar Kateel -visit –Chitradurga- Muruga math

website developers in mysore