ಮೈಸೂರು ಪ್ಯಾಲೆಸ್ ಪುನಶ್ಚೇತನ ಕಾರ್ಯ ನಮಗೆ ವಹಿಸಿ : ಪ್ರಮೋದಾದೇವಿ ಒಡೆಯರ್

ಮೈಸೂರು, ಮೇ 29, 2019 : (www.justkannada.in news) ವಿಶ್ವವಿಖ್ಯಾತ ಮೈಸೂರು ಅರಮನೆಯ ದುರಸ್ತಿ ಮತ್ತು ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಮಗೆ ಅವಕಾಶ ನೀಡಿ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ರಾಜ್ಯ ಸರಕಾರವನ್ನು ಕೇಳಿಕೊಂಡಿದ್ದಾರೆ.

ಕಟ್ಟಡದ ಪಾರಂಪರಿಕತೆಗೆ ಸ್ವಲ್ಪವೂ ಧಕ್ಕೆಯಾಗದಂತೆ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಆದ್ದರಿಂದ ಈ ಕಾರ್ಯವನ್ನು  ನಮ್ಮ ಪ್ರತಿಷ್ಠಾನದಿಂದಲೇ ಕೈಗೊಳ್ಳಲು ಅವಕಾಶ ನೀಡುವಂತೆ ರಾಜ್ಯಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದಿಷ್ಟು….

ಅಂತಾರಾಷ್ಟ್ರೀಯ ಪಾರಂಪರಿಕ ತಜ್ಞರ ಸಹಯೋಗದೊಂದಿಗೆ ನಮ್ಮದೇ ಪಾರಂಪರಿಕ ತಜ್ಞರ ತಂಡದಿಂದ ದುರಸ್ತಿ ಮತ್ತು ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಲಾಗುವುದು. ಇದಕ್ಕೆ ಸರಕಾರ ಸಮ್ಮತಿಸಿದರೆ ಅತ್ಯುತ್ತಮವಾಗಿ ಮಾಡಬಹುದು ಎಂದರು.
ಪ್ರವಾಸಿಗರ ತಾಣವಾಗಿರುವ ಮೈಸೂರು ಅರಮನೆಯ ನೆಲಹಾಸು, ಕಲ್ಯಾಣ ಮಂಟಪದ ನೆಲಹಾಸು ಮತ್ತು ಮೇಲ್ಚಾವಣಿಯ ದುರಸ್ತಿ ಆಗಬೇಕಾಗಿದೆ. ಈ ಕಾರ್ಯಕ್ಕೆ ಸರಕಾರ ಅನುದಾನ ನೀಡಬೇಕಿಲ್ಲ. ಅರಮನೆಗೆ ಬರುವ  ಆದಾಯದಿಂದಲೇ ಮಾಡಿಸಬಹುದಾಗಿದೆ ಎಂದರು.
ನಮ್ಮ ಪ್ರತಿಷ್ಠಾನದಿಂದ ಈಗಾಗಲೇ ಚಾಮುಂಡೇಶ್ವರಿ ದೇವಾಲಯ, ಗನ್ಹೌಸ್,ವಾಣಿವಿಲಾಸ ಶಾಲೆ, ಅರಸು ಬೋರ್ಡಿಂಗ್ ಶಾಲೆ ಕಟ್ಟಡ, ಬೆಂಗಳೂರು ಅರಮನೆ, ಬೆಂಗಳೂರು ಅರಮನೆ ಆವರಣದಲ್ಲಿರುವ ಆಂಜನೇಯ ದೇವಸ್ಥಾನ, ಊಟಿ ಅರಮನೆಯ ದುರಸ್ತಿ ಮತ್ತು ಪುನಶ್ಚೇತನ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು

key words : mysore-palace-retoration-work-pramodadevi-wodeyar