ಈಜಲು ತೆರಳಿದ್ಧ ಮೈಸೂರಿನ ಯುವಕ ನೀರುಪಾಲು: ಮೃತದೇಹ ಪತ್ತೆ…

Promotion

ಮಂಡ್ಯ,ಫೆಬ್ರವರಿ,4,2021(www.justkannada.in): ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ತೊಣ್ಣೂರುಕೆರೆಯಲ್ಲಿ ಈಜಾಡಲು ತೆರಳಿದ್ದ ಮೈಸೂರಿನ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.jk

ಮೈಸೂರಿನ ಮಂಡಿಮೊಹಲ್ಲಾ ನಿವಾಸಿ ಮಹಮದ್ ತಂಝೀಮ್ ಹುಸೇನ್ (19) ಮೃತಪಟ್ಟ ಯುವಕ. ಮಹಮದ್ ತಂಝೀಮ್ ಹುಸೇನ್ ಜನವರಿ 31ರಂದು ತನ್ನ ಗೆಳೆಯರ ಜೊತೆ ತೊಣ್ಣೂರುಕೆರೆಗೆ ಪ್ರವಾಸಕ್ಕೆ ತೆರಳಿದ್ದನು. ಈ ಮಧ್ಯೆ ಕೆರೆಯಲ್ಲಿ ಈಜಾಡಲು ಹೋಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದನು.mysore-youth-swim-death-mandya

ಸತತ ಮೂರು ದಿನಗಳ ಕಾಲ ಅಗ್ನಿಶಾಮಕ ದಳ ಮತ್ತು ಪೋಲೀಸರು ಶವದ ಶೋಧ ಕಾರ್ಯ ನಡೆಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಈ ಮಧ್ಯೆ ನಿನ್ನೆ ಕೆರೆಯ ತಪ್ಪಲಿನಲ್ಲಿ ಮಹಮದ್ ತಂಝೀಮ್ ಹುಸೇನ್  ಶವ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ.

Key words: Mysore- youth – swim-death- mandya