ಮೈಸೂರು ಡಿಸಿ ರೋಹಿಣಿ ಸಿಂಧೂರಿ ಪರ ‘ಸಿಂಗಲ್ಲಾಗೊಂದು ಪ್ರತಿಭಟನೆ’..!

Promotion

ಮೈಸೂರು, ಮೇ 06, 2021 : (www.justkannada.in news) ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಪಿತೂರಿ ನಡೆಸುವ ಮೂಲಕ ಕಪ್ಪು ಮಸಿಬಳಿಯಲಾಗುತ್ತಿದೆ ಎಂದು ಆರೋಪಿಸಿ ಏಕಾಂಗಿ ಪ್ರತಿಭಟನೆ ನಡೆಸಲಾಗಿದೆ.

ಮೈಸೂರು ಯುವ ಬಳಗದ ಕಾರ್ಯದರ್ಶಿ ನವೀನ್, ಸ್ವಾತಂತ್ರ ಹೋರಾಟಗಾರರ ಉದ್ಯಾನದ ಗಾಂಧಿಪ್ರತಿಮೆಯ ಮುಂಭಾಗ ಮನವಿಫಲಕ ಹಿಡಿದು ರಾಜ್ಯಸರ್ಕಾರದ ಗಮನ ಸೆಳೆದರು

ಮೈಸೂರು ಯುವ ಬಳಗದ ಕಾರ್ಯದರ್ಶಿ ನವೀನ್ ಮಾತನಾಡಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಒರ್ವ ದಕ್ಷ ಜಿಲ್ಲಾಧಿಕಾರಿ. ಇಂಥ ಅಧಿಕಾರಿಯ ಸೇವೆ ಮೈಸೂರಿಗೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳನ್ನು ಮೈಸೂರಿನಲ್ಲೇ ಉಳಿಸಿಕೊಳ್ಳುಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.

mysore-youth-protest-dc-rohini-sindhoori-IAS

ಕೋವಿಂಡ್ ಎರಡನೇ ಅಲೆಯ ದುಷ್ಪರಿಣಾಮವನ್ನು ಪ್ರಪ್ರಥಮವಾಗಿ ಊಹಿಸಿ, ಜಿಲ್ಲೆಯ ಜನರನ್ನು ರಕ್ಷಿಸಲು ಮುಂಜಾಗೃತ ಕ್ರಮ ಕೈಗೊಂಡಿದ್ದರು, ಕೋವಿಡ್ 2ನೆ ಅಲೆ ಲಾಕ್ ಡೌನ್ ಕ್ರಮ ಜಾರಿಗೆ ಬರುವದಕ್ಕೂ ಮುನ್ನ ಮೈಸೂರು ಜಿಲ್ಲೆಗೆ ಹೊರಗಿನವರ ಪ್ರವೇಶಕ್ಕೆ ಕೆಲ ನಿರ್ಬಂಧ ಹೇರಿದ್ದರು, ಇಂತಹ ದಕ್ಷ ಮಹಿಳಾ ಅಧಿಕಾರಿ ಮೈಸೂರಿಗೆ ಬಂದಿರುವುದು ಹೆಮ್ಮೆಯಾಗಿದೆ. ಜತೆಗೆ ಅನ್ಯರಿಗೆ ಮಾದರಿಯಾಗಿದ್ದಾರೆ, ಅಂತವರ ವಿರುದ್ಧ ಕೆಲವರು ಮಾನವೀಯತೆ ದೃಷ್ಠಿ ನೋಡದೇ ಕೋವಿಡ್ ಸಂದರ್ಭವನ್ನು ಲೆಕ್ಕಿಸದೆ, ಕೀಳುಮಟ್ಟದ ಟೀಕೆಗೆ ಮುಂದಾಗಿರುವುದು ಸರಿಯಲ್ಲ. ಇವರ ಪ್ರಚಾರದ ಹುಚ್ಚಿನಿಂದ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ.

ಕಳೆದ ಹತ್ತು ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ವಿವಿಧ ಹುದ್ದಗಳಲ್ಲಿ ಕಾರ್ಯ ನಿರ್ವಹಿಸಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪರವಾಗಿ ಮೈಸೂರಿಗರು ಧ್ವನಿಯೆತ್ತಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

 

key words : mysore-youth-protest-dc-rohini-sindhoori-IAS