ISCA ಕಾರ್ಯಕಾರಿ ಸದಸ್ಯರಾಗಿ ಮೈಸೂರು ಯುವ ವಿಜ್ಞಾನಿ ಡಾ. ಶೋಭಿತ್ ರಂಗಪ್ಪ ಆಯ್ಕೆ

kannada t-shirts

ಮೈಸೂರು,ಫೆಬ್ರವರಿ,10,2023(www.justkannada.in): ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್‌ (ISCA) ಸದಸ್ಯರುಗಳು ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ, ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್ ಫಾರ್ ಮಾಲಿಕ್ಯೂಲರ್ ಮೆಡಿಸಿನ್‌ ನ ನಿರ್ದೇಶಕರಾದ ಡಾ. ಶೋಭಿತ್ ರಂಗಪ್ಪರವರನ್ನು 2023-24 ನೇ ಸಾಲಿನ ISCA ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮತದಾನದ ಮೂಲಕ ಆಯ್ಕೆಮಾಡಿದ್ದಾರೆ.

ಡಾ. ಶೋಭಿತ್, ಸಕ್ರಿಯ ಸಂಶೋಧಕರಾಗಿದ್ದು, ಅಂತಾರಾಷ್ಟ್ರೀಯ ಪ್ರತಿಷ್ಠಿತ ಜರ್ನಲ್‌ಗಳಲ್ಲಿ 80 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹಾಗೂ 5 ಪೇಟೆಂಟ್‌ ಗಳನ್ನು ಕ್ಯಾನ್ಸರ್ ಡ್ರಗ್ ಡಿಸ್ಕವರಿ ಕ್ಷೇತ್ರದಲ್ಲಿ ಹೊಂದಿದ್ದಾರೆ.

“ಡಾ. ಶೋಭಿತ್ ರಂಗಪ್ಪ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಹೆಸರಾಂತ ರಾಷ್ಟ್ರೀಯ ಸಂಸ್ಥೆ ISCA ಗುರುತಿಸಿರುವುದು ನಮ್ಮ ಆದಿಚುಂಚನಗಿರಿ ವಿಶ್ವವಿದ್ಯಾಲಯಕ್ಕೆ ಸಂದ ಗೌರವವಾಗಿದೆ ಮತ್ತು ಮುಂದೆಯೂ ಡಾ. ಶೋಭಿತ್ ಇನ್ನೂ ಹಲವು ಪ್ರಶಸ್ತಿಗಳನ್ನು ಪಡೆಯುವರು ಎಂದು ನಮಗೆ ನಂಬಿಕೆಯಿದೆ” ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ ಎಂ.ಎ, ಶೇಖರ್ ಹೇಳಿದರು.

Key words: Mysore young -scientist Dr. Shobhit Rangappa – selected- ISCA- executive member.

website developers in mysore